ಹೊಸದಿಗಂತ ವರದಿ,ಮಡಿಕೇರಿ:
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಡಿಕೇರಿ-ಮಂಗಳೂರು ರಸ್ತೆಯ ಮದೆನಾಡು ಸಮೀಪದ ಕರ್ತೋಜೆಯಲ್ಲಿ ಮರ ಸಹಿತ ಭೂ ಕುಸಿತ ಉಂಟಾಗಿದ್ದು, ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.
ಹೆದ್ದಾರಿಯ ಎರಡು ಕಡೆಯಿಂದಲೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಾರೀ ಮಳೆಯ ನಡುವೆಯೂ ಜೆಸಿಬಿ-ಹಿಟಾಚಿ ಯಂತ್ರ ಬಳಸಿ ರಸ್ತೆಯ ಒಂದ ಬದಿಯ ಮಣ್ಣು-ಮರ ತೆರವಿಗೆ ಕಾರ್ಯಾಚರಣೆ ನಡೆಯುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಮರಗಳ ತೆರವಿಗೆ ಕ್ರಮಕೈಗೊಂಡಿದ್ದಾರೆ.
ಕಳೆದ ಮಳೆಗಾಲದಲ್ಲೂ ಕರ್ತೋಜಿ ಬಳಿ ಭೂಕುಸಿತ ಉಂಟಾಗಿತ್ತು.