BIG NEWS | ನಾಸಾ-ಇಸ್ರೋ ಸಹಯೋಗದ NISAR ಉಪಗ್ರಹ ಯಶಸ್ವಿ ಉಡಾವಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಭಾರತ ಮತ್ತು ಅಮೆರಿಕ ನಡುವಿನ ಹೊಸ ಪಾಲುದಾರಿಕೆ ಎನ್ನುವ ನಿಟ್ಟಿನಲ್ಲಿ ಭೂಮಿಯ MRI ಸ್ಕ್ಯಾನರ್ ಎಂದೇ ಕರೆಯಲ್ಪಡುವ NISAR (NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್) ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹವು ಭೂಮಿಯ ಮೇಲ್ಮೈಯನ್ನು ಸ್ಕ್ಯಾನ್ ಮಾಡಿ, ನೈಸರ್ಗಿಕ ವಿಕೋಪಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುತ್ತದೆ. ಈ ಉಪಗ್ರಹವು ಹವಾಮಾನ ಬದಲಾವಣೆ, ಕೃಷಿ, ಮತ್ತು ಜಲ ಸಂಪನ್ಮೂಲ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ.

NISAR ಮಿಷನ್ ಎಂದರೇನು?
NISAR ಎನ್ನುವುದು ನಾಸಾ ಮತ್ತು ಇಸ್ರೋ ಜಂಟಿಯಾಗಿ ನಿರ್ಮಿಸಿದ ಕೆಳ ಭೂ ಕಕ್ಷೆ (LEO) ಉಪಗ್ರಹವಾಗಿದೆ. ಇದರ ಪೂರ್ಣ ಹೆಸರು ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್. ಇದನ್ನು ಭೂಮಿಯ ಮೇಲ್ಮೈ, ಮಂಜುಗಡ್ಡೆ ಮತ್ತು ಕಾಡುಗಳನ್ನು ಸ್ಕ್ಯಾನ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದನ್ನು “ಭೂಮಿಯ MRI ಸ್ಕ್ಯಾನರ್” ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಭೂಮಿಯ ಮೇಲ್ಮೈಯ ಸೂಕ್ಷ್ಮ ಚಿತ್ರಗಳನ್ನು ತೆಗೆದುಕೊಳ್ಳಬಲ್ಲದು, ವೈದ್ಯರು MRI ಸ್ಕ್ಯಾನ್ ಮೂಲಕ ದೇಹದೊಳಗಿನ ವಿವರಗಳನ್ನು ನೋಡುವಂತೆಯೇ ಇದು ಸೆಂಟಿಮೀಟರ್‌ಗಳ ಮಟ್ಟದಲ್ಲಿ ಬದಲಾವಣೆಗಳನ್ನು ಸೆರೆಹಿಡಿಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!