ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸುಖಾಂತ್ಯವಾಗಿದ್ದು, ರಕ್ಷಣಾ ಸಿಬ್ಬಂದಿ 41 ಕಾರ್ಮಿಕರ ಪೈಕಿ ಐವರನ್ನು ಸುರಕ್ಷಿತವಾಗಿ ಹೊರ ಕರೆ ತಂದಿದ್ದಾರೆ.
17 ದಿನಗಳಿಂದ ಸಿಲುಕಿದ್ದ ಕಾರ್ಮಿಕರನ್ನು (Workers) ರಕ್ಷಣೆ ಮಾಡಲಾಗಿದೆ.
ರಕ್ಷಣಾ ಸಿಬ್ಬಂದಿ ಒಬ್ಬೊಬ್ಬರೇ ಕಾರ್ಮಿಕರನ್ನು ಹೊರಗೆ ತರುತ್ತಿದ್ದಾರೆ. ಸ್ಟ್ರೆಚರ್ ಗಳ ಮೇಲೆ ಮಲಗಿಸಿ ಪೈಪ್ ಮೂಲಕ ಹಗ್ಗದಿಂದ ಎಳೆದು ಹೊರ ತರುವ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಮಿಕರು ಸುರಂಗದಿಂದ ಹೊರ ಬರುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.