ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೊಲ್ಲುವ ಉದ್ದೇಶದಿಂದ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಗೆ ಉಕ್ರೇನ್ ಪ್ರಯತ್ನಿಸಿದೆ ಎಂದು ರಷ್ಯಾ ಆರೋಪಿಸಿದೆ .
ಪುಟಿನ್ ನಿವಾಸದ ಮೇಲೆ ಎರಡು ಡ್ರೋನ್ ಮೂಲಕ ಹತ್ಯೆಗೆ ಪ್ರಯತ್ನ ಮಾಡಲಾಗಿದೆ. ಆದರೆ ರಷ್ಯಾ ಭದ್ರತಾ ಪಡೆ ಎರಡೂ ಡ್ರೋನ್ ಹೊಡೆದುರುಳಿಸಿದೆ. ಈ ದಾಳಿ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಹೇಳಿಕೆ ಬಿಡುಗಡೆ ಮಾಡಿದೆ.
ಎರಡು ಶಸ್ತ್ತಾರಸ್ತ್ರ ತುಂಬಿದ ಡ್ರೋನ್ಗಳು ಕ್ರೆಮ್ಲಿನ್ ನಿವಾಸದ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್ ಹೊಡೆದುರಳಿಸಿದೆ. ಈ ಪ್ರತಿದಾಳಿಯಲ್ಲಿ ವ್ಲಾದಿಮಿರ್ ಪುಟಿನ್ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ.ಉಕ್ರೇನ್ ಈ ದಾಳಿ ನಡೆಸಿದೆ. ಇದು ಭಯೋತ್ಪಾದಕ ಕೃತ್ಯ ಎಂದು ರಷ್ಯಾ ಹೇಳಿದೆ.
ಮೇ.9 ರಂದು ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ ಹಾಕಲು ಈ ದಾಳಿ ನಡೆದಿದೆ. ಹೀಗಾಗಿ ಇದರ ಹಿಂದಿನ ಕೈವಾಡದ ಮೇಲೆ ಪ್ರತಿ ದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ.