March 12, 2026
Thursday, March 12, 2026
spot_img

ನಟಿ ಹನಿ ರೋಸ್ ಗೆ ಬಿಗ್ ರಿಲೀಫ್: ಜಿಎಸ್‌ಟಿ ನೊಟೀಸ್ ರದ್ದುಗೊಳಿಸಿದ ಕೇರಳ ಹೈಕೋರ್ಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಹನಿ ರೋಸ್ ಗೆ ಕೇರಳ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ (GST) ಇಲಾಖೆ ನೀಡಿದ್ದ ನೊಟೀಸ್ ಅನ್ನು ಕೋರ್ಟ್ ಕಾನೂನುಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಿದೆ.

ನಟಿ ಹನಿ ರೋಸ್ ಅವರು ಒಟ್ಟು ಆದಾಯವನ್ನು ಸರಿಯಾಗಿ ಘೋಷಿಸಿಲ್ಲ ಮತ್ತು ನಿಯಮದಂತೆ ತೆರಿಗೆ ಪಾವತಿಸಿಲ್ಲ ಎಂದು ಜಿಎಸ್‌ಟಿ ಇಲಾಖೆ ಆರೋಪಿಸಿತ್ತು. ಈ ಸಂಬಂಧ ಇಲಾಖೆಯು ಕಳೆದ ಹಲವು ವರ್ಷಗಳ ತೆರಿಗೆ ದಾಖಲೆಗಳನ್ನು ಒಟ್ಟಿಗೆ ಸಲ್ಲಿಸುವಂತೆ ನೊಟೀಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ನಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಜಿಎಸ್‌ಟಿ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದೆ. ‘ಹಲವು ವರ್ಷಗಳ ತೆರಿಗೆ ವಿವರಗಳನ್ನು ಒಂದೇ ನೊಟೀಸ್ ಮೂಲಕ ಕೇಳುವುದು ಸರಿಯಲ್ಲ. ಪ್ರತಿ ಆರ್ಥಿಕ ವರ್ಷದ ತೆರಿಗೆ ದಾಖಲೆಗಳನ್ನು ಪ್ರತ್ಯೇಕವಾಗಿಯೇ ಕೇಳಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನೊಟೀಸ್ ನೀಡಬೇಕು ಎಂದು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !