ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾದ ಟೈಟಲ್ ವಿವಾದಕ್ಕೆ ಬ್ರೇಕ್ ಬಿದಿದ್ದು, ಚಿತ್ರ ನಿರ್ಮಾಣ ಸಂಬಂಧ ನೀಡಿದ್ದ ತಡೆಯನ್ನು ಸಿಟಿ ಸಿವಿಲ್ ಕೋರ್ಟ್ ತೆರವುಗೊಳಿಸಿದೆ.
ಈ ಮೂಲಕ ನಟಿ ರಮ್ಯಾಗೆ ಬಿಗ್ ರಿಲೀಫ್ ಸಿಕ್ಕಿದೆ.
ಸ್ವಾತಿ ಮುತ್ತಿನ ಮಳೆಹನಿಯೇ ಟೈಟಲ್ ತಡೆ ಕೋರಿ ರಾಜೇಂದ್ರ ಸಿಂಗ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಚಿತ್ರ ನಿರ್ಮಾಣ ಮಾಡಲು ರಮ್ಯಾ ಅವರಿಗಿದ್ದ ಅಡ್ಡಿ ನಿವಾರಣೆಯಾಗಿದೆ. ಕೋರ್ಟ್ ಜೂನ್ 1ಕ್ಕೆ ವಿಚಾರಣೆ ಮುಂದೂಡಿದೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾ ನಿರ್ಮಾಣ ಮಾಡುವ ಮೂಲಕ ಅನೇಕ ವರ್ಷಗಳ ಬಳಿಕ ಸಿನಿಮಾರಂಗಕ್ಕೆ ಪಾವಾಸ್ ಆಗಿದ್ದಾರೆ. ಆದರೆ ಸಿನಿಮಾ ಸೆಟ್ಟೇರಿ ಕೆಲವೇ ದಿನಕ್ಕೆ ರಾಜೇಂದ್ರ ಸಿಂಗ್ ಬಾಬು ರಮ್ಯಾ ಸಿನಿಮಾದ ವಿರುದ್ಧ ದೂರು ನೀಡಿದ್ದರು. ಈ ಶೀರ್ಷಿಕೆ ಬಳಸದಂತೆ ರಾಜೇಂದ್ರ ಸಿಂಗ್ ಬಾಬು ಅಕ್ಷೇಪ ಎತ್ತಿದ್ದರು.
ಒಂದು ಟೈಟಲ್ ನೀಡಿದ್ದೇ ಆದರೆ ಕೃತಿಚೌರ್ಯವಾಗುತ್ತೆ ಎಂದು ಹೇಳಿದ್ದರು. ರಾಜೇಂದ್ರ ಸಿಂಗ್ ಬಾಬು ಅವರು ಈ ಶೀರ್ಷಿಕೆಯನ್ನು ಈಗಾಗಲೇ ನೋಂದಾಯಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದರು. ‘ಸ್ವಾತಿ ಮುತ್ತಿನ ಮಳೆಹನಿಯೇ’ ರಮ್ಯಾ ಅವರ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬರುತ್ತಿದ್ದು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ.