ಫೋನ್ ಬಳಕೆದಾರರಿಗೆ ಬಿಗ್ ರಿಲೀಫ್: ಅಮಿತಾಬ್ ಬಚ್ಚನ್ ಕಾಲರ್ ಟ್ಯೂನ್ ಇನ್ಮುಂದೆ ಕೇಳಿಸಲ್ಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಫೋನ್ ಕರೆ ಮಾಡಿದಾಗ ಈ ಮೊದಲೇ ರೆಕಾರ್ಡ್ ಮಾಡಿದ ಸಂದೇಶ ಕೇಳಿಬರುತ್ತಿತ್ತು. ಆದ್ರೆ ಇದೀಗ ಅಮಿತಾಭ್ ಬಚ್ಚನ್‌ರ ಧ್ವನಿಯಲ್ಲಿ ಮೊಬೈಲ್ ಕಾಲ್‌ಗಳಲ್ಲಿ ಮೊದಲು ಕೇಳಿಬರುತ್ತಿದ್ದ ಸೈಬರ್‌ಕ್ರೈಂ ಜಾಗೃತಿ ಕಾಲರ್ ಟ್ಯೂನ್‌ನ್ನು ಗುರುವಾರದಿಂದ ತೆಗೆದುಹಾಕಲಾಗುವುದು ಎಂದು ವರದಿಯಾಗಿದೆ.

ಈ ಜಾಗೃತಿ ಕಾರ್ಯಕ್ರಮವು ಕೊನೆಗೊಂಡಿದ್ದು, ಇಂದಿನಿಂದ ಕಾಲರ್ ಟ್ಯೂನ್ ತೆಗೆದುಹಾಕಲಾಗುವುದು ಎಂದು ವರದಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಈ ಟ್ಯೂನ್ ತಕ್ಷಣ ಸಂಪರ್ಕಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ, ಈ ಕಾಲರ್ ಟ್ಯೂನ್‌ಗಾಗಿ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸೋಮವಾರ ಎಕ್ಸ್‌ನಲ್ಲಿ, “ಹೌದು ಸರ್, ನಾನು ಕೂಡ ಅವರ ಅಭಿಮಾನಿ. ಹಾಗಾದರೆ?” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಒಬ್ಬ ಬಳಕೆದಾರ, “ಫೋನ್‌ನಲ್ಲಿ ಹೇಳುವುದನ್ನು ನಿಲ್ಲಿಸಿ,” ಎಂದು ಉತ್ತರಿಸಿದ್ದರು. ಇದಕ್ಕೆ ಬಚ್ಚನ್, “ಸರ್ಕಾರಕ್ಕೆ ಹೇಳಿ ಭಾಯ್, ಅವರು ಹೇಳಿದ್ದನ್ನು ನಾನು ಮಾಡಿದೆ” ಎಂದು ತಿರುಗೇಟು ನೀಡಿದರು.

ಈ ಕಾಲರ್ ಟ್ಯೂನ್, ಸೈಬರ್ ವಂಚನೆಯ ಬಗ್ಗೆ ಜನರಿಗೆ ಮಾಹಿತಿ ತಿಳಿಸುವ ಸರ್ಕಾರದ ಪ್ರಯತ್ನವಾಗಿತ್ತು. ಆದರೆ, ತುರ್ತು ಸಂದರ್ಭಗಳಲ್ಲಿ ಸಂಪರ್ಕಕ್ಕೆ ವಿಳಂಬವಾಗುವ ದೂರುಗಳಿಂದಾಗಿ, ಇದನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಬಚ್ಚನ್‌ರ ಧ್ವನಿಯ ಈ ಜಾಗೃತಿ ಸಂದೇಶವು ಜನರಲ್ಲಿ ವ್ಯಾಪಕ ಗಮನ ಸೆಳೆದಿತ್ತು, ಆದರೆ ಟೀಕೆಗಳಿಂದಾಗಿ ಇದರ ಅವಧಿ ಕೊನೆಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!