ಗ್ರಾಹಕರಿಗೆ ಮತ್ತೆ ಬಿಗ್ ಶಾಕ್: ತೆಂಗಿನಕಾಯಿ ರೇಟ್ ಕೇಳಿದ್ರೆ ಬಾಯಿ ಬಡ್ಕೊಳೋದು ಪಕ್ಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಂಗಿನಕಾಯಿ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಈ ಹಿಂದೆ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಎಳನೀರು ಹೆಚ್ಚು ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ತೆಂಗಿನಕಾಯಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗಿದೆ.

ತೆಂಗಿನಕಾಯಿಗೆ 20, 25, 30 ಇತ್ತು. ಈಗ 65, ರೂ.ವರೆಗೆ ಮಾರಾಟವಾಗುತ್ತಿದೆ. ಕೆ.ಜಿ.ಗೆ 32-33 ರೂ.ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಇದೀಗ 60 ರೂ.ಗೆ ತಲುಪಿದೆ. ಇಳುವರಿ ಕಡಿಮೆಯಾಗಿರುವುದು ಮತ್ತು ಎಳನೀರಿಗೂ ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!