ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ನಷ್ಟವಾದ ಬಳಿಕ ಅರವಿಂದ್ ಕೇಜ್ರಿವಾಲ್‌ಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದ್ದು, ಒಂದೆಡೆ ಹಗರಣಗಳ ಆರೋಪ, ತನಿಖೆಯಾದರೆ ಮತ್ತೊಂದೆಡೆ ಆಮ್ ಆದ್ಮಿ ಪಾರ್ಟಿಯ 13 ಕೌನ್ಸಿಲರ್ಸ್ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಕೌನ್ಸಿಲರ್ಸ್ ಈ ನಿರ್ಧಾರದಿಂದ ಅರವಿಂದ್ ಕೇಜ್ರಿವಾಲ್ ಕಂಗಾಲಾಗಿದ್ದಾರೆ.
ದೆಹಲಿ ಸರ್ಕಾರ ಇದೀಗ ಬಿಜೆಪಿ ಪಾಲಾಗಿದ್ದರೆ, ದೆಹಲಿಯಲ ಮುನ್ಸಿಪಲ್ ಕಾರ್ಪೋರೇಶನ್ ಈಗಲೂ ಆಮ್ ಆದ್ಮಿ ಪಾರ್ಟಿ ಕೈಯಲ್ಲಿದೆ. ಆದರೆ ಆಪ್ ರಾಜಕೀಯ, ನಾಯಕರ ನಿರ್ಧಾರ, ಧೋರಣೆಗಳಿಂದ MCD ಕೌನ್ಸಿಲರ್ಸ್ ಬೇಸತ್ತು ಹೋಗಿದ್ದಾರೆ. ಇದರಿಂದ 13 ಆಪ್ ಕೌನ್ಸಿಲರ್ಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ನೀಡಿ ಹೊರ ಬಂದ 13 ಕೌನ್ಸಿಲರ್ಸ್ ಇದೀಗ ಆಪ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 2022ರಲ್ಲಿ ದೆಹಲಿ ಕಾರ್ಪೋರೇಶನ್ ಅಧಿಕಾರ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿ ಆಡಳಿತವನ್ನು ಪಾರದರ್ಸಕವಾಗಿ ನಡೆಸಲು ವಿಫಲವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿದೆ. ಅಸಮರ್ಪಕ ಆಡಳಿತ, ಪಾರ್ಟಿ ನಾಯಕರು ಹಾಗೂ ಜನಪ್ರಿತಿನಿಧಿಗಳ ನಡುವಿನ ಸಂವಹನ ಕಡಿಮೆಯಾಗಿದೆ. ಪಾರ್ಟಿ ನಾಯಕರು ತೀರ್ಮಾನ, ಜನಪ್ರತಿನಿದಿಗಳಿಗೆ ತಿಳಿಯುತ್ತಿಲ್ಲ. ಆಪ್ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ರಾಜೀನಾಮೆ ನೀಡಿದ ನಾಯಕರ ಆರೋಪಿಸಿದ್ದಾರೆ.
ಇತ್ತ ಆಮ್ ಆದ್ಮಿ ಪಾರ್ಟಿಯಿಂದ ರಾಜೀನಾಮ ನೀಡಿದ ಹೊರಬಂದ 13 ಕೌನ್ಸಿಲರ್ಸ್ ಇದೀಗ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇಂದ್ರಪ್ರಸ್ಥ ವಿಕಾಸ್ ಪಾರ್ಟಿ ಹೆಸರಿನಲ್ಲಿ ಪಕ್ಷ ಘೋಷಿಸಿದ್ದಾರೆ. ರಾಜೀನಾಮೆ ನೀಡಿ ಹೊರಬಂದ ಆಪ್ ನಾಯಕ ಮುಕೇಶ್ ಗೋಯೆಲ್ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪನೆಯಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಇಂದ್ರಪಸ್ಥ ವಿಕಾಸ್ ಪಾರ್ಟಿ ಸ್ಪರ್ಧಿಸಲಿದೆ ಎಂದಿದೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯಿಂದ ಆಡಳಿತ ಕಸಿದುಕೊಳ್ಳಲಿದೆ ಎಂದಿದೆ.