ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮೇಲೆ ಕಣ್ಣಿಟ್ಟ ಆಸ್ಟ್ರೇಲಿಯಾಗೆ ಬಿಗ್​ ಶಾಕ್: ದಿಢೀರ್ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಟೀಮ್​​ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್​​ ಗವಾಸ್ಕರ್ ಸರಣಿ ಶುರುವಾಗಲಿದೆ. ನವೆಂಬರ್‌ನಲ್ಲಿ ನಡೆಯಲಿರೋ ಈ ಸರಣಿಗೆ ಈಗಾಗಲೇ ಟೀಮ್​ ಇಂಡಿಯಾ ಪ್ರಕಟವಾಗಿದೆ.

ಈ ಸರಣಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಇದಕ್ಕೆ ಕಾರಣ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌. ಯಾರು ಈ ಸರಣಿಯಲ್ಲಿ ಗೆಲ್ಲುತ್ತಾರೋ ಅವರು ನೇರ ವಿಶ್ವ ಟೆಸ್ಟ್‌ ಚಾಂಪಿಯನ್​​ಶಿಪ್‌ ಫೈನಲ್‌ ಪ್ರವೇಶ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಆಸ್ಟ್ರೇಲಿಯಾಗೆ ಆಘಾತದ ಸುದ್ದಿ ಒಂದಿದೆ.

ಆಸ್ಟ್ರೇಲಿಯಾ ತಂಡದ ಸ್ಟಾರ್​ ಪ್ಲೇಯರ್​ ಹಠಾತ್​​ ನಿವೃತ್ತಿ ಘೋಷಿಸಿದ್ದಾರೆ. ಯಾವುದೇ ಸರಣಿ ಇರಲಿ ಆಸೀಸ್​​ ತಂಡದ ಗೆಲ್ಲುವಲ್ಲಿ ಮ್ಯಾಥ್ಯೂ ವೇಡ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಈಗ ವೇಡ್‌ ನಿವೃತ್ತಿ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಅದರಲ್ಲೂ ಬಾರ್ಡರ್​​ ಗವಾಸ್ಕರ್​ ಟ್ರೋಫಿ ಹೊತ್ತಲ್ಲೇ ನಿವೃತ್ತಿ ಘೋಷಿಸಿರುವುದು ಆಸ್ಟ್ರೇಲಿಯಾಗೆ ಬಿಗ್​ ಶಾಕ್​ ಆಗಿದೆ.

ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್‌ 2011ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಸೀಸ್​​ ಪರ ಆಡಿರೋ 92 ಟಿ20 ಪಂದ್ಯಗಳಲ್ಲಿ ವೇಡ್​​ 134.15 ಸ್ಟ್ರೈಕ್‌ ರೇಟ್‌ನಲ್ಲಿ 1202 ರನ್ ಗಳಿಸಿದ್ದಾರೆ. ಈ ಫಾರ್ಮೆಟ್‌ನಲ್ಲಿ 3 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇವರು 36 ಟೆಸ್ಟ್‌ ಪಂದ್ಯ ಆಡಿದ್ದು 29.87ರ ಸರಾಸರಿಯಲ್ಲಿ 1613 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. 97 ಏಕದಿನ ಪಂದ್ಯ ಆಡಿರೋ ಮ್ಯಾಥ್ಯೂ ವೇಡ್ 1867 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಜತೆಗೆ 11 ಅರ್ಧಶತಕಗಳು ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!