March 26, 2026
Thursday, March 26, 2026
spot_img

ಇರಾನ್ ನೌಕಾಪಡೆಗೆ ಬಿಗ್ ಶಾಕ್: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಕಮಾಂಡರ್ ಅಲಿರೆಜಾ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಭಾವಿ ನೌಕಾ ಕಮಾಂಡರ್ ಅಲಿರೆಜಾ ತಂಗ್‌ಸಿರಿ, ಬಂದರ್ ಅಬ್ಬಾಸ್‌ನಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿ, ಜಾಗತಿಕ ಹಡಗು ಸಂಚಾರಕ್ಕೆ ಸವಾಲಾಗಿದ್ದ ತಂಗ್‌ಸಿರಿ ಅವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.

2018 ರಿಂದ ನೌಕಾ ಕಮಾಂಡರ್ ಆಗಿದ್ದ ಇವರು, ಈ ಹಿಂದಿನ ಹಲವು ದಾಳಿಗಳಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಗಣನೀಯವಾಗಿ ಕುಸಿದಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 120 ಹಡಗುಗಳು ಸಂಚರಿಸುತ್ತಿದ್ದ ಜಾಗದಲ್ಲಿ, ಈ ತಿಂಗಳ 25 ದಿನಗಳಲ್ಲಿ ಕೇವಲ 155 ಹಡಗುಗಳು ಮಾತ್ರ ಸಂಚರಿಸಿವೆ.

ಸದ್ಯಕ್ಕೆ ಈ ಬಗ್ಗೆ ಇರಾನ್ ಆಗಲಿ ಅಥವಾ ಇಸ್ರೇಲ್ ಮಿಲಿಟರಿ ಆಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !