April 11, 2026
Saturday, April 11, 2026
spot_img

ಭಾರತಕ್ಕೆ ಗುಡ್‌ನ್ಯೂಸ್: ಹಾರ್ಮುಜ್ ಮಿತ್ರ ರಾಷ್ಟ್ರಗಳಿಗೆ ಮಾತ್ರ ಓಪನ್ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದ ಸಂಕಷ್ಟದ ನಡುವೆ, ಇರಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾರ್ಮುಜ್ ಜಲಸಂಧಿ ಮೂಲಕ ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡಗುಗಳು ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.

ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಈ ಸೌಲಭ್ಯ ನೀಡಲಾಗಿದೆ. ಆದರೆ ವಿರೋಧಿ ರಾಷ್ಟ್ರಗಳ ಹಡಗುಗಳಿಗೆ ಮಾರ್ಗ ಮುಚ್ಚಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:

ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಮುಖ ತೈಲ ಮಾರ್ಗವಾದ ಈ ಜಲಸಂಧಿಯನ್ನು ಕೆಲಕಾಲ ನಿರ್ಬಂಧಿಸಲಾಗಿತ್ತು. ಆದರೆ ಇತ್ತೀಚಿನ ಕದನ ವಿರಾಮ ಘೋಷಣೆಯ ಬಳಿಕ ಪರಿಸ್ಥಿತಿ ಸ್ವಲ್ಪ ಶಮನಗೊಂಡಿದೆ.

ಜಾಗತಿಕ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ವಿಶ್ವಸಂಸ್ಥೆ ಕೂಡ ಜಲಸಂಧಿಯನ್ನು ತೆರೆಯುವಂತೆ ಇರಾನ್‌ಗೆ ಮನವಿ ಮಾಡಿತ್ತು. ಈ ನಿರ್ಧಾರದಿಂದ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸಾಗಣೆ ಸುಗಮವಾಗುವ ನಿರೀಕ್ಷೆ ಇದ್ದು, ಇಂಧನ ಕ್ಷೇತ್ರಕ್ಕೆ ಇದು ದೊಡ್ಡ ಪರಿಹಾರವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !