ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಚಿನ್ನದ ಬೆಲೆ ಗಗನಕ್ಕೇರಿದೆ. ಕಳೆದ ಒಂದು ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 3,645 ರೂ. ಏರಿಕೆಯಾಗಿದ್ದರೆ, ದೇಶಿಯ ಮಾರುಕಟ್ಟೆಯಲ್ಲಿ 897 ರೂ.ಗಳಷ್ಟು ಹೆಚ್ಚಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಬೇಲೆ 1 ಲಕ್ಷ ರೂ. ಗಡಿ ದಾಟಿದೆ. ಅದೇ ರೀತಿ ದೇಶಿಯ ಮಾರುಕಟ್ಟೆಯಲ್ಲಿ 1 ಲಕ್ಷ ರೂ. ಸಮೀಪಿಸಿದೆ.
ಇದೇ ಜೂನ್ 6ರಂದು 10 ಗ್ರಾಂ ಚಿನ್ನದ ಬೆಲೆ 97,036 ರೂ. ಇತ್ತು. ಜೂನ್ 13ರಂದು ಮಾರುಕಟ್ಟೆ ಮುಕ್ತಾಯದ ವೇಳೆಗೆ 1,00,681 ರೂ.ಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದ್ರೆ ಕಳದೆ ಒಂದು ವಾರದಲ್ಲಿ 3,645 ರೂ. ಏರಿಕೆ ಕಂಡಿದೆ.