ಕಮಲ್‌ಗೆ ಬಿಗ್‌ ಶಾಕ್‌ : ಕರ್ನಾಟಕದಲ್ಲಿ ಥಗ್‌ಲೈಫ್‌ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಅಭಿನಯದ ಥಗ್‌ ಲೈಫ್‌ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ. ಕರ್ನಾಟಕದಲ್ಲಿ ‘ಥಗ್‌ಲೈಫ್’ ಚಿತ್ರ ರಿಲೀಸ್ ಮಾಡುವ ಕುರಿತು ನಟ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ.

ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಈ ಕುರಿತು ವಿಚಾರಣೆ ನಡೆಸಿ ಜೂನ್ 10ರ ಒಳಗೆ ಕಮಲ್ ಹಾಸನ್ ಫಿಲಂ ಚೇಂಬರ್ ಜೊತೆಯಲ್ಲಿ ಮಾತುಕತೆ ಮಾಡಿಕೊಂಡು ವಿವಾದ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿದೆ. ಅಲ್ಲಿಯವರೆಗೂ ಕರ್ನಾಟಕದಲ್ಲಿ ಥಗ್‌ಲೈಫ್ ರಿಲೀಸ್ ಮಾಡದಂತೆ ಸೂಚಿಸಿದೆ.

ಕ್ಷಮೆ ಕೇಳಲು ಕಮಲ್‌ ಹಾಸನ್‌ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನ ವಿಚಾರಣೆಯಲ್ಲಿ ಹೈಕೋರ್ಟ್‌ ಖಾರವಾದ ಪ್ರಶ್ನೆಯನ್ನು ಕೇಳಿತ್ತು. ಮಧ್ಯಾಹ್ನ ನಂತರ ವಿಚಾರಣೆಯಲ್ಲಿ ಕಮಲ್‌ ಪರ ವಕೀಲರು ವಿವಾದ ಇತ್ಯರ್ಥ ಪಡಿಸಲು ಒಂದು ವಾರ ಕಾಲಾವಕಾಶ ನೀಡಬೇಕೆಂದು ಕೋರಿದರು. ಕೋರ್ಟ್‌ ಈ ಮನವಿಯನ್ನು ಪುರಸ್ಕರಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!