ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬದ ಸಂಭ್ರಮ ಶುರುವಾಗಲಿದೆ. ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸ ತೊಡಕು ಹಬ್ಬಕ್ಕೂ ಮುನ್ನವೇ ಮಾಂಸಾಹಾರಿಗಳಿಗೆ ದೊಡ್ಡ ಶಾಕ್ ಎದುರಾಗಿದೆ.
ಚಿಕನ್, ಮಟನ್ ಮಾಂಸದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಮಾರುಕಟ್ಟೆಯಲ್ಲಿ ಸ್ಕಿನ್ ಲೆಸ್ ಬೈಲರ್ ಚಿಕನ್ ಬೆಲೆ ಕೆಜಿಗೆ 230-240 ರೂ.ಗೆ ಏರಿಕೆಯಾಗಿದೆ.
ಟೈಸನ್ ಚಿಕನ್ ಬೆಲೆ 270 ರೂಪಾಯಿಗೆ ಏರಿಕೆಯಾಗಿದೆ. ಮೀನಿನ ಬೆಲೆಯಲ್ಲಿ ಕೂಡ ಏರಿಕೆಯಾಗಿದ್ದು. ಕುರಿ ಮಾಂಸವನ್ನು 700-800 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬಿಸಿಲಿನ ಝಳಕ್ಕೆ ಚಿಕನ್, ಮಟನ್, ಮೀನು ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.