ಬೆಂಗಳೂರಿನಲ್ಲಿ ಜ.6 ರಿಂದ ಬೃಹತ್ ‘ತೃತೀಯ ವಿಪ್ರ ಮಹಿಳಾ ಸಮ್ಮೇಳನ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಇದೇ ಜನವರಿ 6 ಮತ್ತು 7 ರಂದು ಬೃಹತ್ ತೃತೀಯ ವಿಪ್ರ ಮಹಿಳಾ ಸಮ್ಮೇಳನ ನಡೆಯಲಿದೆ.

ಬೆಂಗಳೂರು ಮಹಾನಗರದ ಶಂಕರಪುರ ಬಡಾವಣೆಯ ಶಂಕರಮಠದ ಆವರಣದಲ್ಲಿರುವ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಜರುಗಲಿರುವ ಈ ಬಹೃತ್ ಸಮ್ಮೇಳನವನ್ನು ಕೇಂದ್ರ ಸರ್ಕಾರದ ವಿತ್ತ ಸಚಿವೆ  ನಿರ್ಮಲ ಸೀತಾರಾಮನ್ ಉದ್ಘಾಟಿಸಲಿದ್ದಾರೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿಸೂರ್ಯ, ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ, ಅದ್ವೆತ ತತ್ವ ವಿಭೂಷಣ ಗುರುಸೇವಾಧುರೀಣ ಪದ್ಮಶ್ರೀ ಡಾ|| ವಿ.ಆರ್. ಗೌರೀಶಂಕರ್, ಬೆಂಗಳೂರು ನಗರದ ಬಸವನಗುಡಿ ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕರಾದ ಉದಯ್ ಬಿ. ಗರುಡಾಚಾರ್, ಜಯನಗರ ಕ್ಷೇತ್ರದ ಶಾಸಕ  ಸಿ.ಕೆ. ರಾಮಮೂರ್ತಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರೂ ಆದ ತೇಜಸ್ವಿನಿ ಅನಂತ್‌ಕುಮಾರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಜನವರಿ 7 ರಂದು  ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಡಾ|| ವಿ.ಆರ್. ಗೌರೀಶಂಕರ್, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿಗಳಾದ  ಡಾ. ಭೀಮೇಶ್ವರ ಜೋಶಿಯವರು, ಶಾಸಕರೂ, ರಾಜ್ಯ ಆಡಳಿತ ಸುಧಾರಣಾ ಅಯೋಗದ ಅಧ್ಯಕ್ಷರೂ ಹಾಗೂ ತಿರುಮಲ ತಿರುಪತಿ ದೇವಾಲಯದ ನಿದೇರ್ಶಕರೂ ಆದ  ಆರ್.ವಿ. ದೇಶಪಾಂಡೆ, ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕರಾದ  ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ  ಯು.ಬಿ. ವೆಂಕಟೇಶ್‌ರವರು, ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ  ದಿನೇಶ್ ಗುಂಡೂರಾವ್ ಅವರೂ ಶಿಕ್ಷಣ ತಜ್ಞ ಡಾ|| ಗುರುರಾಜ ಕರ್ಜಗಿಯವರು, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ಸಾವಿರಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಮಹಿಳೆಯರ ಸಬಲೀಕರಣ ಸೇರಿದಂತೆ   ವಿವಿಧ ವಿಚಾರಗೋಷ್ಠಿಗಳೂ ನಡೆಯಲಿದ್ದು, ವಿವಿಧ ಕ್ಷೇತ್ರಗಳ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಸಮಾವೇಶದ ಅಂಗವಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯಲಿವೆ. ಭಾನುವಾರ 7 ರಂದು ಬೆಳಿಗ್ಗೆ 8.30ಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಿಂದ ಶಂಕರಮಠದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಉದ್ಘಾಟಿಸಲಿದ್ದಾರೆ. 17 ವರ್ಷಗಳ ನಂತರ ನಡೆಯುತ್ತಿರುವ ಈ ಬೃಹತ್ ಸಮಾವೇಶದಲ್ಲಿ ವಸ್ತುಪ್ರದರ್ಶನ, ಮಾರಾಟ ಮಳಿಗೆಗಳೂ ಇರಲಿದ್ದು, ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಪ್ರದರ್ಶನಗಳು ನಡೆಯಲಿವೆ.

ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಜಿಲ್ಲೆಗಳಿಂದ ಬರುವ ಮಹಿಳಾ ಪ್ರತಿನಿಧಿಗಳಿಗಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಕಾ ಸುಧೀರ ಇನಾಂದಾರ ರನ್ನು ಸಮ್ಮೆಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಮೇಧಿನಿ ಉದಯ್ ಗರುಡಾಚಾರ್‌ರವರು ಕಾರ‍್ಯಾಧ್ಯಕ್ಷರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!