ಚಿತ್ರದುರ್ಗದಲ್ಲಿ ಕಲುಷಿತ ನೀರು ಪ್ರಕರಣಕ್ಕೆ ಬಿಗ್ ಟ್ವಿಸ್, ಲವ್ ಸ್ಟೋರಿ ಲಿಂಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೂವರು ಮೃತಪಟ್ಟಿದ್ದು, 130 ಮಂದಿ ಆಸ್ಪತ್ರೆ ಸೇರಿದ್ದಾರೆ. ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಹೌದು, ಇದರ ಹಿಂದೆ ಲವ್ ಸ್ಟೋರಿಯ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಬೇಕೆಂದೇ ಟ್ಯಾಂಕ್‌ಗೆ ವಿಷ ಬೆರೆಸಿರುವ ಬಗ್ಗೆ ಊರಿನಲ್ಲಿ ಮಾತುಕತೆಗಳಾಗುತ್ತಿವೆ.

ಈ ಊರಿನಲ್ಲಿ ಮಾದಿಗ ಸಮಾಜ ಹಾಗೂ ಲಿಂಗಾಯತ ಸಮಾಜದವರು ವಾಸಿಸುತ್ತಿದ್ದಾರೆ. ಬೇರೆ ಬೇರೆ ಸಮುದಾಯಗಳ ಹುಡುಗ ಹುಡುಗಿ ಪ್ರೀತಿಸಿ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಆದರೆ ಹುಡುಗಿ ಮೈನರ್ ಹಾಗಾಗಿ ಪೊಲೀಸರು ಆಕೆಯನ್ನಯ ರಕ್ಷಿಸಿದ್ದರು. ಇದೆಲ್ಲ ನಡೆದಿದ್ದು ಒಂದು ವರ್ಷದ ಹಿಂದೆ. ಆದರೆ ಇತ್ತೀಚಿನ ಬೆಳವಣಿಗೆಯಂತೆ ಆ ಹುಡುಗಿ ಊರಿಗೆ ಬಂದಿದ್ದು, ಅಂಗಡಿ ಮುಂದೆ ಅಳುತ್ತಿದ್ದಳು ಎನ್ನಲಾಗಿದೆ.

ಆಕೆಯನ್ನು ಗ್ರಾಮಸ್ಥರು ಪೊಲೀಸರ ಬಳಿ ತಂದೊಪ್ಪಿಸಿದ್ದರು. ಪೋಷಕರು ಮಗಳು ಮೈನರ್ ಎಂದು ಗೊತ್ತಿದ್ದರೂ ಮತ್ತೆ ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೋಗಿದ್ದಾರೆ ಎಂದುಕೊಂಡು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಮಗಳನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಅಥವಾ ಬಲವಂತವಾಗಿ ಕರೆತಂದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇದಾದ ಕೆಲವೇ ದಿನದಲ್ಲಿ ಮಾದಿಗ ಸಮಾಜದ ಮನೆಗಳಿಗೆ ಪೂರೈಸುವ ಕುಡಿಯುವ ನೀರಿಗೆ ವಿಷ ಬೆರೆತಿದೆ ಎಂದು ಆರೋಪಿಸಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!