ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಘಾಜಿಯಾಬಾದ್ ನಿರ್ಭಯಾ ಮಾದರಿಯ ರೇಪ್,ಕಿಡ್ನಾಪ್ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆ ಮೇಲೆ ಅತ್ಯಚಾರ ನಡೆದೇ ಇಲ್ಲ.
ಹೌದು, 36 ವರ್ಷದ ಮಹಿಳೆಯನ್ನು ಕಿಡ್ನಾಪ್ ಮಾಡಿ, ಮನೆಯೊಂದರಲ್ಲಿ ಇಟ್ಟುಕೊಂಡು ಎರಡು ದಿನ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಖಾಸಗಿ ಅಂಗಗಳಿಗೆ ರಾಡ್ ತೂರಿಸಿದ್ದಾರೆ ಮೂಟೆಯಲ್ಲಿ ಕಟ್ಟಿ ಬಿಸಾಡಿದ್ದಾರೆ ಎಂದು ಮಹಿಳೆ ಪೊಲೀಸರ ಬಳಿ ಹೇಳಿದ್ದರು. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಆದರೆ ಇದ್ಯಾವುದೂ ನಡೆದೇ ಇಲ್ಲ, ಇದೆಲ್ಲಾ ಆಕೆಯೇ ಹೆಣೆದ ಕಥೆಯಾಗಿದೆ. ಐವರ ವಿರುದ್ಧ ಆಸ್ತಿ ವಿಚಾರದಲ್ಲಿ ಆಕೆಗೆ ತಕರಾರಿತ್ತು. ಅದೇ ಕಾರಣದಿಂದ ಅವರನ್ನು ಸಿಕ್ಕಿಸಲು ಗ್ಯಾಂಗ್ ರೇಪ್ ಕಥೆ ಕಟ್ಟಿದ್ದಾರೆ. ಎರಡು ದಿನ ತಮ್ಮ ಸ್ನೇಹಿತರ ಮನೆಗಳಲ್ಲಿ ಸಮಯಕಳೆದು ನಂತರ ದೂರು ನೀಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಪರೀಕ್ಷೆಗೆ ಆಕೆ ಒಪ್ಪಿಗೆ ಸೂಚಿಸಲಿಲ್ಲ. ಇಲ್ಲಿಂದ ಪೊಲೀಸರಿಗೆ ಅನುಮಾನ ಆರಂಭವಾಗಿದ್ದು, ಆಳವಾದ ತನಿಖೆ ನಡೆಸಿದ್ದಾರೆ. ಇದೆಲ್ಲಾ ಸುಳ್ಳು ಕಥೆ ಎಂದು ಮೀರತ್ ರೇಂಜ್ ಐಜಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರು ನೀಡಿದ ಮಹಿಳೆ ಹಾಗೂ ಆಕೆಯ ಸ್ನೇಹಿತರ ವಿರುದ್ಧ ಸುಳ್ಳು ದೂರು ನೀಡಿದ ಆರೋಪದ ಅನ್ವಯ ಕೇಸ್ ದಾಖಲಾಗಿದೆ. ಮಹಿಳೆ ಹಾಊ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.