ಅಲ್ಲು ಅರ್ಜುನ್ ಅರೆಸ್ಟ್ ಕೇಸ್ ನಲ್ಲಿ ಬಿಗ್ ಟ್ವಿಸ್ಟ್: ಯೂಟರ್ನ್​​ ಹೊಡೆದ ದೂರುದಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಅಲ್ಲು ಅರ್ಜುನ್​​ ಅರೆಸ್ಟ್​ ಕೇಸ್​ ನಲ್ಲಿ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ನನ್ನ ಮಗ ಅಲ್ಲು ಅರ್ಜುನ್​​ ಫ್ಯಾನ್​​. ಪುಷ್ಪ-2 ಸಿನಿಮಾ ನೋಡಬೇಕು ಎಂದಿದ್ದಕ್ಕೆ ನನ್ನ ಮಗನನ್ನು ಸಂಧ್ಯಾ ಥಿಯೇಟರ್​​ಗೆ ಕರೆದುಕೊಂಡು ಹೋಗಿದ್ದೆ. ಆಗ ಕಾಲ್ತುಳಿತಕ್ಕೆ ಆಕೆ ಸಾವನ್ನಪ್ಪಿದ್ದಾಳೆ. ಇದರಲ್ಲಿ ಅಲ್ಲು ಅರ್ಜುನ್​ ಅವರಿಗೂ ಸಂಬಂಧವೇ ಇಲ್ಲ ಎಂದು ಮೃತ ಮಹಿಳೆ ರೇವತಿ ಪತಿ ಭಾಸ್ಕರ್​​ ಹೇಳಿದ್ದಾರೆ.

ನಾನು ಬೇಕಾದ್ರೆ ಕೇಸ್​ ವಾಪಸ್​ ಪಡೆಯುತ್ತೇನೆ. ಪೊಲೀಸರು ನಮಗೆ ಏನು ತಿಳಿಸದೆ ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಿದ್ದಾರೆ ಎಂದು ಭಾಸ್ಕರ್​​ ಅವರು ಹೇಳಿದ್ದಾರೆ.

ನನಗೆ ಈ ವಿಷಯವೇ ಗೊತ್ತಿಲ್ಲ. ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ನಾನು ಮೊಬೈಲ್​​ನಲ್ಲಿ ವಿಡಿಯೋ ನೋಡಿದ್ದೇನೆ. ಅಲ್ಲು ಅರ್ಜುನ್​ ಅವರಿಗೂ ಕೇಸ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಕೇಸ್​​ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್​ ಮಾಡಿದ ನಂತರ ಪೊಲೀಸರು ಅಲ್ಲು ಅರ್ಜುನ್​ ಅವರನ್ನು ಹೈದರಾಬಾದ್​​ ನಾಂಪಲ್ಲಿ ಕೋರ್ಟ್​​ನಲ್ಲಿ ಹಾಜರುಪಡಿಸಿದ್ರು. ಕೋರ್ಟ್​ ಈಗ ಮಹತ್ವದ ಆದೇಶ ಹೊರಡಿಸಿದ್ದು, 14 ದಿನಗಳ ಕಾಲ ಅಲ್ಲು ಅರ್ಜುನ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!