October 9, 2026
Friday, October 9, 2026
spot_img

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್: ವೋಟರ್‌ ಐಡಿ, ಆಧಾರ್‌ ಸೇರಿ ದಾಖಲೆಗಳ ಮೇಲಿದೆ ಸರ್ಕಾರದ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವೂ ಕೂಡ ಗೃಹ ಲಕ್ಷ್ಮಿ ಫಲಾನುಭವಿಗಳಾ? ಹಾಗಿದ್ರೆ ಈ ಅಪ್ಡೇಟ್ ಮಿಸ್ ಮಾಡ್ಕೋಬೇಡಿ.

ರಾಜ್ಯ ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಗೆ ಹೊಸ ಪರಿಶೀಲನಾ ಪ್ರಕ್ರಿಯೆ ಶುರು ಮಾಡಿದೆ. ಈ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸಿ ಅರ್ಹರಿಗೆ ಮಾತ್ರ ಸೌಲಭ್ಯ ಮುಂದುವರಿಯುವಂತೆ ಮಾಡಲಾಗುತ್ತದೆ.

ಆಗಸ್ಟ್ 2026ಕ್ಕೆ 3 ವರುಷ ಪೂರೈಸಿರುವ ಹಿನ್ನಲೆಯಲ್ಲಿ ಈ ಯೋಜನೆ ರೂಪಿಸಿ ಅರ್ಹರಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡಲಾಗುತ್ತದೆ.

ಮನೆ ಮನೆ ಭೇಟಿ

ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವಾಗ ಸರಿಯಾದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಕೊಟ್ಟ ದಾಖಲೆಗಳು ಸರಿಯಾಗಿದ್ದಲ್ಲಿ ಮಾತ್ರವೇ ಯೋಜನೆಯ ಸೌಲಭ್ಯ ಮುಂದುವರಿಸುವ ಸಾಧ್ಯತೆ ಇದೆ. ಈ ಪ್ರಕ್ರಿಯೆಗೆ ಒಂದು ತಿಂಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ.

ಏನೆಲ್ಲಾ ದಾಖಲೆಗಳು ಬೇಕು?

ಅಧಿಕಾರಿಗಳು ಮನೆಗೆ ಭೇಟಿ ನೀಡುವಾಗ ನಿಮ್ಮಲ್ಲಿ ಮನೆಯ ಯಜಮಾನಿಯ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆಯ ವಿವರ, ವೋಟರ್ ಐಡಿ, ಮಾಹಿತಿಗಳನ್ನು ಪರಿಶೀಲಿಸಲಾಗುತ್ತದೆ. ಇದರ ಜತೆಗೆ ಫಲಾನುಭವಿಗಳ ಫೇಸ್‌ ರೆಕಗ್ನಿಷನ್‌ ಮೂಲಕ ಬಯೋಮೆಟ್ರಿಕ್‌ ದೃಢೀಕರಣದ ಅವಷ್ಯಕತೆ ಇರುತ್ತದೆ.

ಒಂದು ವೇಳೆ ಮನೆ ಭೇಟಿ ವೇಳೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಕರ್ನಾಟಕ ಒನ್‌, ಸೇವಾ ಕೇಂದ್ರಗಳು ಹಾಗೂ ಪಡಿತರ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ.

Must Read