ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ದೊಡ್ಡ ಜಯ ಸಿಕ್ಕಿದೆ. ಸಾಕಷ್ಟು ವಿರೋಧಗಳ ನಡುವೆ ಅಮೆರಿಕ ಸಂಸತ್ತಿನಲ್ಲಿ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಅಂಗೀಕಾರಗೊಂಡಿದೆ. ಯುಎಸ್ ಕಾಂಗ್ರೆಸ್ ಕೂಡ ಅಂಗೀಕರಿಸಿದೆ.
ಈ ಮಸೂದೆಯನ್ನು ತೆರಿಗೆ ವಿನಾಯಿತಿ ಮತ್ತು ವೆಚ್ಚ ಕಡಿತ ಮಸೂದೆ ಎಂದು ಕರೆಯಲಾಗುತ್ತದೆ. ಈ ಮಸೂದೆಗೆ ಅಮೆರಿಕ ಸಂಸತ್ತಿನ ಎರಡೂ ಸದನಗಳ ಅನುಮೋದನೆ ಸಿಕ್ಕಿದೆ.
ಈಗ ಇದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗಾಗಿ ಕಳುಹಿಸಲಾಗುವುದು. ಇದಾದ ನಂತರ ಇದು ಕಾನೂನಿನ ರೂಪ ಪಡೆಯಲಿದೆ. ಈ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು 214 ವಿರುದ್ಧ 218 ಮತಗಳಿಂದ ಅಂಗೀಕರಿಸಲಾಯಿತು.