ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಮಾಜಿ ಸ್ಪರ್ಧಿ ಅನುರಾಗ್ ದೊಭಾಲ್ ಲೈವ್ ಸ್ಟ್ರೀಮ್ ಮಾಡುತ್ತಲೇ ಮಾರ್ಚ್ 7ರಂದು ಶನಿವಾರ ಕಾರನ್ನು ಉದ್ದೇಶಪೂರ್ವಕ ಅಪಘಾತ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ .
UK07 ರೈಡರ್ ಎಂದೇ ಖ್ಯಾತಿಗೊಂಡಿದ್ದ ಅನುರಾಗ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಭಾರಿ ಜನಪ್ರಿಯತೆ ಪಡೆದಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ತೀವ್ರ ಖಿನ್ನತೆಗೆ ಜಾರಿದ್ದರು. ಖಿನ್ನತೆಯಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿ ಅಪಘಾತ ಮಾಡಿಕೊಂಡಿದ್ದರು.
ಇನ್‌ಸ್ಟಾಗ್ರಾಂ ಮೂಲಕ ವಿಡಿಯೋ ಮಾಡುತ್ತಾ ನೋವು ಹಂಚಿಕೊಂಡಿದ್ದ ಅನುರಾಗ್, ತಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಇದು ನನ್ನ ಕೊನೆಯ ರೈಡ್ ಎಂದು ಲೈವ್ ವಿಡಿಯೋ ಮೂಲಕ ಹೇಳಿದ್ದಾನೆ. ಬಳಿಕ ದೆಹಲಿ ಎಕ್ಸ್‌ಪ್ರೆಸ್‌ವೇನಲ್ಲಿ ಅತೀ ವೇಗವಾಗಿ ವಾಹನ ರೈಡ್ ಮಾಡಿ ಅಪಘಾತ ಮಾಡಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅನುರಾಗ್‌ನ ಆಸ್ಪತ್ರೆ ದಾಖಲಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಪ್ರೀತಿ, ಮದುವೆ ಸಂಕಷ್ಟ
ಅನುರಾಗ್ ಹಾಗೂ ರಿತಿಕಾ ಚೌವ್ಹಾಣ್ ಪ್ರೀತಿಸಿ ಮದುವೆಯಾಗಿದ್ದರು.ಆದರೆ ಇವರ ಪ್ರೀತಿಗೆ ಅನುರಾಗ್ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ಕೈಮುಗಿದು ಬೇಡಿಕೊಂಡರು ಅನುರಾಗ್ ಪೋಷಕರು ಮದುವೆಗೆ ಬರಲಿಲ್ಲ, ಮನೆಗೂ ಸೇರಿಸಿಕೊಳ್ಳಲಿಲ್ಲ. ಬಳಿಕ ಅನುರಾಗ್‌ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಕೆಲ ಬಾರಿ ಅನುರಾಗ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ರಿತಾಕಾಗಿ ಪೋಷಕರು, ಸಹೋದರ ಸೇರಿ ಮನೆಯವರನ್ನೇ ದೂರ ಮಾಡಿದ ಅನುರಾಗ್ ಕೆಲವೇ ತಿಂಗಳಲ್ಲಿ ಮತ್ತೊಂದು ಆಘಾತ ಎದುರಿಸಿದರು. ಪ್ರೀತಿಸಿ ಮದುವೆಯಾದ ರಿತಿಕಾ ದೂರವಾಗಿದ್ದಳು. ಇದು ಅನುರಾಗ್ ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಕಳೆದ ಕೆಲ ತಿಂಗಳಿನಿಂದ ಖಿನ್ನತೆಗೆ ಜಾರಿದ್ದರು.



