Thursday, January 8, 2026

ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮರಾಠಿ ಬಿಗ್ ಬಾಸ್ ಆವೃತ್ತಿ ಮೂರರಲ್ಲಿ ಜನಪ್ರಿಯ ಸ್ಪರ್ಧಿಯಾಗಿದ್ದ ಜಯ್ ದುಧಾನೆಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಯ್ ದುಧಾನೆ ಬಂಧನ ಟಿವಿ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ.

ಜಯ್ ದುಧಾನೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಮಾಹಿತಿ ಖಚಿತಪಡಿಸಿದ ಮುಂಬೈ ಪೊಲೀಸರು ಸದ್ದಿಲ್ಲದೆ ಕಾಯುತ್ತಾ ನಿಂತಿದ್ದಾರೆ. ಜಯ್ ದುಧಾನೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯ್ ದುಧಾನೆ ಮೇಲೆ ಬರೋಬ್ಬರಿ 4.61 ಕೋಟಿ ರೂಪಾಯಿ ವಂಚನೆ ಪ್ರಕರಣವಿದೆ. ಜಯ್ ದುಧಾನೆ ಹಾಗೂ ಕುಟುಂಬದ ವಿರುದ್ಧ ನಿವೃತ್ತ ಎಂಜಿನೀಯರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಜಯ್ ದುಧಾನೆ ಬಂಧಿಸಿದ್ದಾರೆ. ಜಯ್ ದುಧಾನೆ ರಿಯಲ್ ಎಸ್ಟೇಟ್‌ನಲ್ಲಿ ತನಗೆ 4.61 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು.

ಜಯ್ ದುಧಾನೆ ಮಾತಿನ ಮೇಲೆ ಭರವಸೆ ಇಟ್ಟು ನಿವೃತ್ತ ಎಂಜಿನೀಯರ್ ನಾಲ್ಕು ವಾಣಿಜ್ಯ ಶಾಪ್ ಖರೀದಿಸಿದ್ದರು. ಇದಕ್ಕಾಗಿ 4.61 ಕೋಟಿ ರೂಪಾಯಿ ನೀಡಿದ್ದರು. ಆದರೆ ಈ ವಾಣಿಜ್ಯ ಕಟ್ಟಡಗಳ ದಾಖಲೆ ಪತ್ರ ಇಟ್ಟು ಅದಾಗಲೇ ಸಾಲ ಪಡೆಯಲಾಗಿದೆ ಅನ್ನೋ ಮಾಹಿತಿ ಬಳಿಕ ಗೊತ್ತಾಗಿದೆ. ಹೀಗಾಗಿ ನಿವೃತ್ತ ಎಂಜಿನೀಯರ್ ದೂರು ನೀಡಿದ್ದರು.

ಜಯ್ ದುಧಾನೆ ಕಮರ್ಷಿಯಲ್ ಶಾಪ್ ಮಾರಾಟಕ್ಕಾಗಿ ನಕಲಿ ದಾಖಲೆ ಪತ್ರ ಸೃಷ್ಟಿಸಿದ್ದಾರೆ ಎಂದು ಎಂಜಿನೀಯರ್ ಆರೋಪಿಸಿದ್ದಾರೆ. ಬ್ಯಾಂಕ್ ಕ್ಲಿಯರೆನ್ಸ್ ಪತ್ರ, ಇತರ ಯಾವುದೇ ಸಾಲಗಳಿಲ್ಲ ಎಂಬ ಪತ್ರಗಳನ್ನು ನಕಲಿ ಮಾಡಲಾಗಿದೆ. ಇದ್ಯಾವುದರ ಅರಿವಿಲ್ಲದ ಶಾಪ್ ಖರೀದಿಸಿದ್ದ ಎಂಜಿನೀಯರ್‌ಗೆ ಬ್ಯಾಂಕ್‌ನಿಂದ ಸಾಲ ಮರುಪಾವತಿ ಮಾಡಿಲ್ಲ ಅನ್ನೋ ಜಪ್ತಿ ನೋಟಿಸ್ ಬಂದಾಗಲೆ ವಂಚನೆ ಅರಿವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಯ್ ದುಧಾನೆ ನಟನಾಗಿ, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮರಾಠಿ ಬಿಗ್ ಬಾಸ್ 3ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದಾರೆ. ಇತ್ತೀಚೆಗೆಷ್ಟೇ ಅಂದರೆ ಡಿಸೆಂಬರ್ 24ರಂದು ಬಹುಕಾಲದ ಗೆಳತಿ ಹರ್ಷಲ್ ಪಾಟೀಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ

error: Content is protected !!