ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಹಿಂದಿ ಸೀಸನ್ 16’ರ ಸ್ಪರ್ಧಿ ಮತ್ತು ಗಾಯಕ ಅಬ್ದು ರೋಜಿಕ್ರನ್ನು ದುಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ಕಳ್ಳತನದ ಆರೋಪದ ಮೇಲೆ ಅಬ್ದು ರೋಜಿಕ್ ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆದಾಗ್ಯೂ, ಗಾಯಕ ಎಲ್ಲಿ, ಏನನ್ನು ಕಳ್ಳತನ ಮಾಡಿದ್ದ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಬ್ದು ಅವರ ತಂಡ ಒದಗಿಸಿದ ಮಾಹಿತಿಯ ಪ್ರಕಾರ, ‘ನಮಗೆ ತಿಳಿದಿರುವುದು ಕಳ್ಳತನದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂಬುದಷ್ಟೇ ಗೊತ್ತಾಗಿದೆ’ ಎಂದು ಹೇಳಿದೆ.
ಅಬ್ದು ರೋಜಿಕ್ ಕೇವಲ 21 ನೇ ವಯಸ್ಸಿನಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಅತ್ಯಂತ ವಿವಾದಾತ್ಮಕ ಕಾರ್ಯಕ್ರಮ ‘ಬಿಗ್ ಬಾಸ್ 16′ ನಲ್ಲಿಯೂ ಭಾಗವಹಿಸಿದ್ದರು. ಈ ಕಾರ್ಯಕ್ರಮದಿಂದಾಗಿ, ಅಬ್ದು ಪ್ರತಿ ಮನೆಯಲ್ಲೂ ಪ್ರಸಿದ್ಧರಾದರು. ಕಳ್ಳತನದ ಆರೋಪದ ಮೇಲೆ ಅರೆಸ್ಟ್ ಆಗಿರೋದು ನಿಜವಾ? ಯಾವ ವಸ್ತು ಕಳವು ಮಾಡಿದ್ದಾರೆ ಎಂಬೆಲ್ಲಾ ಮಾಹಿತಿ ದೊರಕಿಲ್ಲ.