ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಿಗ್‌ಬಾಸ್‌ನಲ್ಲಿ ನಟ ವಿನಯ್ ಸಿಕ್ಕಾಪಟ್ಟೆ ಶೈನ್ ಆಗಿದ್ದು, ಇತ್ತೀಚೆಗ್ಯಾಕೋ ಅಹಂಕಾರ ಹೆಚ್ಚಾದಂತೆ ಕಾಣುತ್ತಿದೆ ಅನ್ನೋದು ಫ್ಯಾನ್ಸ್ ಅಭಿಪ್ರಾಯ.
ಕಳೆದ ವಾರವಷ್ಟೇ ಸುದೀಪ್ ವಿನಯ್ ಒಂದು ರೀತಿ ಆನೆ ಥರ, ನೀವೆಲ್ಲಾ ಸೇರಿ ಅವರನ್ನು ಫೈನಲಿಸ್ಟ್ ಮಾಡಿದ್ದೀರಿ ಅಂತ ಹೇಳಿದ್ರು. ಇದಾದ ಮೇಲೆ ವಿನಯ್ ಅಹಂಕಾರ ಅತಿರೇಖಕ್ಕೇರಿದ್ದು, ಈ ವೀಕೆಂಡ್‌ನಲ್ಲಿ ಸುದೀಪ್ ವಿನಯ್ ಅಹಂಕಾರ ಇಳಿಸ್ತಾರಾ ಅನ್ನೋ ಬಗ್ಗೆ ಚರ್ಚೆಗಳಾಗ್ತಿವೆ.
ಕಳಪೆ ಯಾರಾಗಬೇಕು ಅನ್ನೋ ಬಗ್ಗೆ ಓಪನ್ ಚರ್ಚೆ ಮಾಡುವಂತಿಲ್ಲ, ಆದರೂ ವಿನಯ್ ಚರ್ಚೆ ಮಾಡಿದ್ದಾರೆ, ಇನ್ನು ಡ್ರೋನ್ ಪ್ರತಾಪ್ ದೃಷ್ಟಿ ಸರಿ ಇಲ್ಲ, ಹೆಣ್ಮಕ್ಕಳನ್ನು ಕೆಟ್ಟದಾಗಿ ನೋಡ್ತಾರೆ ಅನ್ನೋ ಡ್ಯಾಮೇಜಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಸಾಲದಕ್ಕೆ ಎಲ್ಲ ಹೆಣ್ಣುಮಕ್ಕಳಿಗೂ ಹೋಗೇ, ಬಾರೆ ಎಂದು ಏಕವಚನ ಬಳಸಿದ್ದು, ಬಿಗ್‌ಬಾಸ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಬಳೆ ತೊಟ್ಟ ಹೆಂಗಸರಿಂದ ಏನೂ ಆಗೋದಿಲ್ಲ ಅನ್ನುವಂಥ ಅರ್ಥ ಬರುವ ಮಾತುಗಳನ್ನು ಆಡಿದ್ದಾರೆ, ಜೊತೆಗೆ ಭಾಗ್ಯಶ್ರೀ ಸೀರಿಯಲ್ ಡ್ರಾಮಾ ಮಾಡ್ತಾರೆ ಎಂದೆಲ್ಲಾ ಮಾತನಾಡಿದ್ದು, ಸಾಕಷ್ಟು ಮಂದಿಗೆ ಇಷ್ಟವಾಗಿಲ್ಲ. ಈ ಎಲ್ಲದರ ಬಗ್ಗೆ ಚರ್ಚೆ ಆಗಲಿ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.