January18, 2026
Sunday, January 18, 2026
spot_img

Bigg Boss Kannada Season 12 | ಫಿನಾಲೆ ಫೈಟ್‌ನಲ್ಲಿ ಮೊದಲ ವಿಕೆಟ್ ಪತನ: ಟಾಪ್ 6ನಿಂದ ಹೊರಬಿದ್ದ ಧನುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮಹಾ ಸಂಗ್ರಾಮಕ್ಕೆ ಅದ್ಧೂರಿ ತೆರೆ ಬೀಳಲಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಆರಂಭವಾದ ಫಿನಾಲೆ ಸಂಚಿಕೆಯಲ್ಲಿ, ಕಿಚ್ಚ ಸುದೀಪ್ ಅವರು ಮೊದಲ ಎಲಿಮಿನೇಷನ್ ಘೋಷಿಸಿದರು. ಟಾಪ್ 6 ಹಂತ ತಲುಪಿದ್ದ ಸ್ಪರ್ಧಿಗಳ ಪೈಕಿ ಧನುಷ್ ಅವರು ಅತಿ ಕಡಿಮೆ ಮತಗಳನ್ನು ಪಡೆದು ಮನೆಯಿಂದ ಹೊರಬಂದಿದ್ದಾರೆ.

ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಧನುಷ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಅತ್ಯುತ್ತಮ ಟಾಸ್ಕ್ ಪ್ರದರ್ಶನದ ಮೂಲಕವೇ ಟಾಪ್ 6 ತಲುಪಿದ್ದರು. ಆದರೆ, ವಿವಾದಗಳಿಂದ ದೂರ ಉಳಿಯುವ ಅವರ ‘ಸೈಲೆಂಟ್’ ಸ್ವಭಾವವೇ ಅವರಿಗೆ ಹಿನ್ನಡೆಯಾಯಿತೇ ಎಂಬ ಚರ್ಚೆ ಶುರುವಾಗಿದೆ.

ಧನುಷ್ ಅವರಿಗೆ ಒಟ್ಟು 1 ಕೋಟಿ 27 ಲಕ್ಷ ಮತಗಳು ಲಭಿಸಿವೆ.

ಧನುಷ್ ಅವರ ನಿರ್ಗಮನದ ನಂತರ ಈಗ ಕಿರೀಟಕ್ಕಾಗಿ ಪೈಪೋಟಿ ನಡೆಸುತ್ತಿರುವ ಐವರು ಸ್ಪರ್ಧಿಗಳೆಂದರೆ:

ಗಿಲ್ಲಿ ನಟ

ರಕ್ಷಿತಾ ಶೆಟ್ಟಿ

ಅಶ್ವಿನಿ ಗೌಡ

ಕಾವ್ಯಾ ಶೈವ

ರಘು

ಇಂದು ರಾತ್ರಿ ವೇಳೆಗೆ ಈ ಐವರಲ್ಲಿ ಯಾರು ಸೀಸನ್ 12ರ ಕಪ್ ಎತ್ತಿ ಹಿಡಿಯಲಿದ್ದಾರೆ ಎಂಬ ಸಸ್ಪೆನ್ಸ್ ಅಂತ್ಯವಾಗಲಿದೆ.

Must Read

error: Content is protected !!