ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೂ ಟೈಮ್ ಮಾಡ್ಕೊಂಡು ಬಿಗ್ ಬಾಸ್ ಶೂಟಿಂಗ್ ಮಾಡ್ತಾರೆ. ಬಿಗ್‌ಬಾಸ್‌ನ ವೀಕೆಂಡ್ ಎಪಿಸೋಡ್‌ನಲ್ಲಿ ಕಂಟೆಸ್ಟೆಂಟ್ಸ್ ಮಾಡಿದ ಸಣ್ಣ ಸಣ್ಣ ವಿಷಯವನ್ನೂ ಬಯಲಿಗೆಳೆದು ಬುದ್ಧಿ ಹೇಳ್ತಾರೆ, ಆದರೆ ಸುದೀಪ್‌ಗೆ ಎಲ್ಲಾ ಎಪಿಸೋಡ್ ನೋಡೋಕೆ ಟೈಮ್ ಎಲ್ಲಿದೆ?
ಸುದೀಪ್ ಶೋ ಸ್ಕ್ರಿಪ್ಟೆಡ್, ಒಂದು ಎಪಿಸೋಡ್ ಕೂಡ ನೋಡದೇ ಹಾಗೆ ಬರ‍್ತಾರೆ ಎಂದು ಒಂದು ವರ್ಗದ ನೆಟ್ಟಿಗರು ಕಮೆಂಟ್ ಮಾಡಿದ್ದು, ಸುದೀಪ್ ಉತ್ತರ ನೀಡಿದ್ದಾರೆ.
ಶನಿವಾರ ಶೂಟಿಂಗ್ ಇದ್ದರೆ ಶುಕ್ರವಾರ ರಾತ್ರಿಯೇ ಸೆಟ್‌ನಲ್ಲಿ ಇರ‍್ತೀನಿ, ರಾತ್ರಿ ಎರಡು ಗಂಟೆಯಿಂದ ಬೆಳಗ್ಗೆವರೆಗೆ ಎಲ್ಲ ಎಪಿಸೋಡ್‌ಗಳನ್ನು ಕುಳಿತು ನೋಡ್ತೀನಿ. ತದನಂತರವೇ ವೀಕೆಂಡ್ ಎಪಿಸೋಡ್ ಶೂಟ್ ಮಾಡ್ತೀನಿ, ಸ್ಕ್ರಿಪ್ಟ್ ಮಾಡಿಕೊಂಡು ಶೂಟಿಂಗ್ ಮಾಡೋದಕ್ಕೆ ರಿಯಾಲಿಟಿ ಶೋ ಎಂದು ಹೆಸರಿಡಬೇಕಿರಲಿಲ್ಲ ಎಂದು ಸುದೀಪ್ ಹೇಳಿದ್ದಾರೆ.