ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಗರಂ ಆಗಿದ್ದಾರೆ. ಈ ವಾರ ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸುದೀಪ್ ಅವರು ವೇದಿಕೆಯಿಂದ ಆಚೆ ಹೋಗಿದ್ದಾರೆ.
ಭವ್ಯಾ ಅವರು ಸುದೀಪ್ ಅವರು ಹನುಮಂತ ಅವರು ನನಗಿಂತ ಬೆಸ್ಟ್ ಎಂದರು. ಎಲ್ಲದರಲ್ಲೂ ಸಾಮರ್ಥ್ಯ ಇದ್ದವರು ಕಪ್ ಗೆಲ್ಲುತ್ತಾರೆ ಎಂದಿದ್ದಾರೆ. ಬಳಿಕ ಹನುಮಂತ್ ಅವರು ಇಷ್ಟು ದಿನ ಊಟ ಹಾಕಿದ್ದೀವಿ ಗೆಲ್ಲುತ್ತೀವಿ ಎಂದು ತ್ರಿವಿಕ್ರಮ್ ಹೇಳಿರುವ ಮಾತನ್ನು ಹೇಳಿದರು. ತ್ರಿವಿಕ್ರಮ್ ಅವರು ಈ ರೀತಿ ತಾನು ಹೇಳೇ ಇಲ್ಲ ಎಂದು ಮಾತಿಗೆ ಮಾತು ಬೆಳೆಸಿದರು. ಅದೆ ವೇಳೆಗೆ ಕಿಚ್ಚ ವೇದಿಕೆಯಿಂದ ಹೊರ ನಡೆದರು.
ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆ ಊಟ ತಿಂದು ಮೈ ಮರೆತವರು ಯಾರು? ಮನೆ ಮಾತನ್ನ ಕೇಳಿ ಎಚ್ಚರ ಆದವರು ಯಾರು? ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ಕಿಚ್ಚ ಸುದೀಪ್ ಅವರು ಮಾತನ್ನು ಯಾರು ಕೇಳಿಸಿಕೊಳ್ಳುವ ತಾಳ್ಮೆಯನ್ನು ತೋರಿಸಿಲ್ಲ. ಹೀಗಾಗಿ ನೀವೇ ನೀವೇ ಮಾತನಾಡಿಕೊಳ್ಳಿ ಎಂದು ಅಲ್ಲಿಂದ ಹೋಗಿದ್ದಾರೆ.
ಇನ್ನು ಗೌತಮಿ ಅವರ ಗಂಡ ಬಂದು ಸಮಯ ಬಂದಾಗ ನೀವು ಅವರನ್ನು ತುಳಿದುಕೊಂಡು ಮುಂದಕ್ಕೆ ಹೋಗಬೇಕು ಎಂದು ಸಲಹೆ ಕೂಡ ಕೊಟ್ಟಿದ್ದರು. ಮಂಜು ಅವರ ತಂಗಿ ದೀಪಿಕಾ, ದೀಪಿಕಾ ಪುತ್ರಿ ನಕ್ಷಿಕಾ, ಮಂಜು ತಂದೆ ರಾಗಿ ರಾಮಣ್ಣ, ತಾಯಿ ಲಲಿತಮ್ಮ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟರು.
ಯಾರ ಬಾಲವನ್ನೂ ಹಿಡಿಯೋಕೆ ಹೋಗಬೇಡ.ನಿನ್ನನ್ನ ದಾಟಿ ಬೇರೆಯವರು ಮುಂದಕ್ಕೆ ಹೋಗ್ತಿದ್ದಾರೆ. ಅದನ್ನ ನೀನು ತಡೆಯಬೇಕು. ನಿನ್ನನ್ನ ನೋಡಬೇಕು ಎಂದು ಸೂಚನೆ ಕೂಡ ಕೊಟ್ಟಿದ್ದರು.