ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಒಡೆತನದ ಏರ್ ಇಂಡಿಯಾ ಮಂಗಳವಾರ ಪ್ಯಾರಿಸ್ ಏರ್ ಶೋನಲ್ಲಿ ಏರ್ಬಸ್ ಮತ್ತು ಬೋಯಿಂಗ್ನಿಂದ 470 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಕುರಿತು ಟಾಟಾ ಸನ್ಸ್ ಮತ್ತು ಏರ್ ಇಂಡಿಯಾ ಅಧ್ಯಕ್ಷ ಎನ್ ಚಂದ್ರಶೇಖರನ್, ‘ಈ ಹೆಗ್ಗುರುತು ಹೆಜ್ಜೆ ಏರ್ ಇಂಡಿಯಾವನ್ನು ದೀರ್ಘಕಾಲೀನ ಬೆಳವಣಿಗೆ ಮತ್ತು ಯಶಸ್ಸಿಗೆ ಮತ್ತಷ್ಟು ಸ್ಥಾನ ನೀಡುತ್ತದೆ, ಇದು ಜಗತ್ತಿಗೆ ಅತ್ಯುತ್ತಮ ಆಧುನಿಕ ವಾಯುಯಾನವನ್ನು ಪ್ರತಿನಿಧಿಸಲು ಒಗ್ಗೂಡುತ್ತದೆ ಎಂದು ನಮಗೆ ಎಲ್ಲಾ ಭರವಸೆಗಳಿವೆ’ ಎಂದು ಹೇಳಿದರು.
ಏರ್ ಇಂಡಿಯಾ ಕೂಡ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದು, ನಮ್ಮ ಬಲವನ್ನು ಹೆಚ್ಚಿಸಲು ಇಂದು ಪ್ಯಾರಿಸ್ ಏರ್ ಶೋ ಮತ್ತು ಬೋಯಿಂಗ್ ನಿಂದ 470 ಹೊಸ ವಿಮಾನಗಳನ್ನು ಖರೀದಿ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ ಎಂದು ಹೇಳಿಕೊಳ್ಳಲು ಸಂತೋಷವಾಗಿದೆ. ಏರ್ ಇಂಡಿಯಾ ನವ ಭಾರತ ನಿರ್ಮಾಣದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಬದ್ಧವಾಗಿದೆ’ ಎಂದು ತಿಳಿಸಿದೆ.