ಹೊಸದಿಗಂತ ವರದಿ,ಯಲ್ಲಾಪುರ:
ಕಾಂಗ್ರೆಸ್ ಸರಕಾರ ಮತಾಂಧರಿಂದ ಮತಾಂಧರಿಗಾಗಿ ಮತಾಂಧರಿಗೋಸ್ಕರ ಇರುವ ಪಕ್ಷ ಎಂಬಂತಾಗಿದ್ದು, ಮಂತಾಂಧತೆ ಯನ್ನು ಅಪ್ಪಿಕೊಂಡಿರುವ ಕಾಂಗ್ರೆಸ ಪಕ್ಷದಿಂದ ದೇಶಕ್ಕೆ ದುರಂತವಾಗಲಿದೆ ಎಂದು ಮಾಜಿ ಸಚಿವ ಸಿ.ಟಿ .ರವಿ ವಾಗ್ದಾಳಿ ನಡೆಸಿದರು.
ಅವರು ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಮೋದಿ ಸರರ್ಕಾರದಿಂದ ಮಾತ್ರ ಹಿಂದೂಗಳ ಹಾಗೂ ಹೆಣ್ಣುಮಕ್ಕಳ ರಕ್ಷಣೆ ಸಾಧ್ಯ ವೆಂಬುದನ್ನು ಅರಿತು ಕಾಗೇರಿಯವರನ್ನು ಉತ್ತರಕನ್ನಡದಲ್ಲಿ ೨ ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಸಾಬೀತು ಪಡಿಸೋಣ ಎಂದರು.
ಕಾಂಗ್ರೆಸ್ ಸರಕಾರದಲ್ಲಿ ಹಿಂದುಳಿದ ವರ್ಗದವರ ಮೀಸಲಾತಿ ಕಿತ್ತು ಅಲ್ಪ ಸಂಖ್ಯಾತರಿಗೆ ಕೊಡುವ ಮೂಲಕ ವೋಟ್ ಜಿಹಾದ ನಡೆಯುತ್ತಿದೆ. ಹೀಗೆ ಲವ್ ಜಿಹಾದ್ ದೊಂದಿಗೆ ಹೊಸ ಹೊಸ ಜಿಹಾದಿನ ರೂಪಗಳು ಹೊರಬರುತ್ತಿವೆ.ಇದನ್ನು ತಡೆಗಟ್ಟದಿದ್ದರೆ ದೇಶವೇ ಅಧೋಗತಿ ಇಳಿಯುತ್ತದೆ.ಗ್ಯಾರಂಟಿ ಆಸೆಗಾಗಿ ಪಕ್ಷವನ್ನು ಬೆಂಬಲಿಸಿದರೆಮುಂದಿನ ಪೀಳಿಗೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಉಮೇಶ ಭಾಗ್ವತ, ಚಂದ್ರಕಲಾ ಭಟ್ಟ ,ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಪಟ್ಟಣ ಪಂಚಾಯತ ಸದಸ್ಯೆ ಶ್ಯಾಮಿಲಿ ಪಾಠಣಕರ ಮಾತನಾಡಿದರು.
ವೇದಿಕೆಯಲ್ಲಿಮಾಜಿ ತಾಲೂಕಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ, ಜಿಲ್ಲಾ ರೈತಮೋರ್ಚಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ,ರಾಜ್ಯ ಸಮಿತಿ ಸದಸ್ಯೆ ರೇಖಾ ಹೆಗಡೆ, ಪಪಂ ಸದಸ್ಯರಾದ ಸೋಮೇಶ್ವರ ನಾಯ್ಕ,ಆದಿತ್ಯ ಗುಡಿಗಾರ,ಕಲ್ಪನಾ ನಾಯ್ಕ,ಜಿಪಂ ಮಾಜಿ ಸದಸ್ಯೆ ಶೃತಿ ,ಹೆಗಡೆ ಗಣಪತಿ ಬೋಳುಗುಡ್ಡೆ ಇತರರು ಇದ್ದರು.
.ಮಂಡಲ ಕಾರ್ಯದರ್ಶಿ ನಟರಾಜಗೌಡ ನಿರ್ವಹಿಸಿದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು.ಸಭಾಕಾರ್ಯಕ್ರಮಕ್ಕೂ ಮುನ್ನ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋ ನಡೆಸಿದರು.