ಅಮೆರಿಕ ಚುನಾವಣೆಗೆ ಬಿಗ್‌ಟ್ವಿಸ್ಟ್‌, ಸ್ಪರ್ಧೆಯಿಂದ ಹಿಂದೆ ಸರಿದ ಜೋ ಬಿಡೆನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಚುನಾವಣೆಗೆ ಬಿಗ್‌ಟ್ವಿಸ್ಟ್‌ ಸಿಕ್ಕಿದ್ದು, ಸ್ಪರ್ಧೆಯಿಂದ ಹಾಲಿ ಅಧ್ಯಕ್ಷ ಜೋ ಬಿಡೆನ್‌ ಹಿಂದೆ ಸರಿದಿದ್ದಾರೆ.

ಹಾಲಿ ಅಧ್ಯಕ್ಷರಾಗಿರುವ ಜೋ ಬೈಡನ್ ಅವರಿಗೆ ಈಗಾಗಲೇ 81 ವರ್ಷಗಳು ಆಗಿವೆ. ಹೀಗಾಗಿ ಅನಾರೋಗ್ಯ, ವಯಸ್ಸಿನ ಕಾರಣದಿಂದ ಯುಎಸ್​ ಪ್ರೆಸಿಡೆಂಟ್​ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಬೈಡನ್‌ ಅವರು ಹಿಂದೆ ಸರಿದಿದ್ದು ನೂತನ ಅಧ್ಯಕ್ಷರನ್ನು ಸದ್ಯದಲ್ಲೇ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಡೆಮಾಕ್ರಟಿಕ್ ಪಕ್ಷದಿಂದ ಬೇರೊಬ್ಬರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾಗಿದೆ. ಇದರಿಂದ ಡೆಮಾಕ್ರಟಿಕ್​ನಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರು ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬೈಡನ್ ಅವರಿಗೆ ವಯಸ್ಸು ಆದ ಕಾರಣ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಅವರು ಹಿಂದೆ ಸರಿಯುವುದು ಉತ್ತಮ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!