ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವಲ್ಪದರಲ್ಲೇ ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ. ಸಿಎಂ ಭದ್ರತಾ ರೇಖೆಯನ್ನು ದಾಟಿ ಮುಖ್ಯಮಂತ್ರಿಯ ಸಮೀಪಕ್ಕೆ ಬೈಕ್ ಬಂದಿದ್ದರಿಂದ ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಯಿತು. ಇಂದು (ಗುರುವಾರ) ಬೆಳಗ್ಗೆ ವಾಕ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ಕೆಲವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಎಚ್ಚೆತ್ತ ನಿತೀಶ್ ಕುಮಾರ್ ಪಕ್ಕದಲ್ಲಿದ್ದ ಪುಟ್ ಪಾತ್ ಮೇಲೆ ಹಾರಿ ಭಾರೀ ಅನಾಹುತ ತಪ್ಪಿಸಿದರು.
ಸಿಎಂ ವಾಕಿಂಗ್‌ಗಾಗಿ ಮನೆಯಿಂದ ಹೊರಗೆ ಬಂದಾಗ ಈ ಘಟನೆ ನಡೆದಿದೆ. ಸಿಎಂ ಸುತ್ತ ಸದಾ ಭಾರೀ ಭದ್ರತೆ ಇದ್ದರೂ ಬೈಕ್ ಸವಾರರು ಭದ್ರತೆಯನ್ನು ದಾಟಿ ಸಿಎಂಗೆ ಡಿಕ್ಕಿ ಹೊಡೆದಿದ್ದರಿಂದ ಮುಖ್ಯಮಂತ್ರಿ ಭದ್ರತೆಯಲ್ಲಿ ಭಾರಿ ವೈಫಲ್ಯ ಉಂಟಾಗಿರುವುದು ಗೊತ್ತಾಗಿದೆ.
ಬೈಕ್‌ನಲ್ಲಿ ಬಂದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಿಎಂ ರಾಬ್ರಿ ದೇವಿ ಸೇರಿದಂತೆ ಹಲವು ರಾಜಕಾರಣಿಗಳ ನಿವಾಸಗಳಿರುವ ಸರ್ಕ್ಯುಲರ್ ರಸ್ತೆ ಬಳಿ ವಾಕಿಂಗ್ ಮಾಡುವಾಗ ಇಬ್ಬರು ಯುವಕರು ತಮ್ಮ ಮೋಟಾರ್‌ಸೈಕಲ್‌ನಲ್ಲಿ ವೇಗವಾಗಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸಿಎಂ ಭದ್ರತಾ ಲೋಪದ ಬಗ್ಗೆ ವಿಚಾರಣೆ ನಡೆಯುತ್ತಿದೆ.