Friday, November 14, 2025

Bihar Election | ಆರಂಭಿಕ ಮತಎಣಿಕೆಯಲ್ಲಿ ಮ್ಯಾಜಿಕ್‌ ನಂಬರ್‌ ದಾಟಿದ NDA

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಟ್ನಾದ ರಾಜಕೀಯ ತಾಪಮಾನ ಇಂದು ಮತ್ತಷ್ಟು ಏರಿದೆ. ನವೆಂಬರ್ 14ರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನ ಎಣಿಕೆ ಸ್ಪಷ್ಟವಾಗಿ ಎನ್‌ಡಿಎ ಅಲೆಯತ್ತ ತಿರುಗಿದೆ.

243 ಸ್ಥಾನಗಳಲ್ಲಿ 122 ಬಹುಮತಕ್ಕೆ ಅಗತ್ಯವಿರುವಾಗ, ಆರಂಭಿಕ ಹಂತದಲ್ಲೇ ಎನ್‌ಡಿಎ (ಬಿಜೆಪಿ + ಜೆಡಿ(ಯು)) ಸಂಖ್ಯೆಗಳು 125 ಗಡಿಯನ್ನು ದಾಟಿವೆ. ಬಿಜೆಪಿ-ಜೆಡಿ(ಯು) ಮೈತ್ರಿಗೆ ಈ ಮುನ್ನಡೆ ಸ್ಪಷ್ಟವಾದಂತಿದೆ, ಮಹಾಘಟಬಂಧನ್‌ ಗೆ ಈ ದಿನ ಸವಾಲಿನಂತೆ ಆರಂಭವಾಗಿದೆ.

ಚುನಾವಣೆಯ ಕೊನೆಯ ಹಂತದ ದಿನವೇ ಪ್ರಕಟವಾದ ಎಕ್ಸಿಟ್‌ಪೋಲ್‌ಗಳು ಎನ್‌ಡಿಎಗೆ ಬಹುಮತ ಸೂಚಿಸಿದ್ದವು. ಮತ ಎಣಿಕೆ ಬೆಳಗಿನಿಂದಲೇ ಆರ್ಮಭಾವಗಿದ್ದು ಎಕ್ಸಿಟ್‌ಪೋಲ್‌ ಅಂದಾಜು ನಿಜವಾಗುತ್ತಿರುವಂತೆ ಕಾಣುತ್ತಿರುವುದು ಎನ್‌ಡಿಎ ಕಾರ್ಯಕರ್ತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಬಾರಿ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆದಿದ್ದು, ಉತ್ತಮ ಮತದಾನ ದಾಖಲಾಗಿತ್ತು. 7.42 ಕೋಟಿ ಮತದಾರರ ವಿಶ್ವಾಸವನ್ನು ಗೆಲ್ಲುವ ಸ್ಪರ್ಧೆಯಲ್ಲಿ ಬಿಜೆಪಿ ಕಚೇರಿಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಮನೆಮಾಡಿದೆ.

error: Content is protected !!