ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿದ್ದಾಜಿದ್ದಿನ ಬಿಹಾರ ವಿಧಾನಸಭೆ ಚುನಾವಣೆ ಮುಗಿದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಎರಡೂ ಪಕ್ಷಗಳು ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿದ್ದು, ಬಿಹಾರ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ರಾಜ್ಯದ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.ಸಮಸ್ಥಿಪುರದಲ್ಲಿ ಖಾಲಿ ಇವಿಎಂಗಳು ಪತ್ತೆಯಾಗಿದ್ದು, ಆರ್‌ಜೆಡಿ ಪ್ರತಿಭಟನೆ ಮಾಡಿದೆ. ಇವಿಎಂಗಳ ಟ್ಯಾಂಪರ್ ಆದರೆ ಬಿಹಾರದಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಆದಂಥ ದಂಗೆ ಬಿಹಾರದಲ್ಲಿ ಆಗುತ್ತೆ ಅಂತ ಆರ್‌ಜೆಡಿ ನಾಯಕ ಸುನೀಲ್ ಸಿಂಗ್ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿಂದೆ ಸಮಸ್ಥಿಪುರದ ಕಾಲೇಜ್‌ವೊಂದರಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳು ಸಿಕ್ಕಿದ್ದವು. ಆದರೆ, ಇವು ಪ್ರಾಯೋಗಿಕವಾಗಿ ಬಳಸಲಾಗಿದ್ದ ಸ್ಲಿಪ್‌ಗಳು ಅಂತ ಕೇಂದ್ರ ಚುನಾವಣಾ ಆಯೋಗವೇ ಸ್ಪಷ್ಟನೆ ಕೊಟ್ಟಿತ್ತು. 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6, 11ರಂದು 2 ಹಂತದ ಮತದಾನ ಆಗಿದ್ದು, ಶೇ.67.13ರಷ್ಟು ಐತಿಹಾಸಿಕ ವೋಟಿಂಗ್ ದಾಖಲಾಗಿದೆ. ಈ ಬಾರಿ ಮಹಿಳೆಯರು ಶೇ.71ರಷ್ಟು ಮತದಾನ ಮಾಡಿದ್ದು, ಮಹಿಳೆಯರ ಮತ ನಿರ್ಣಾಯಕವಾಗಿದೆ.
ಇಂದು ಬಿಹಾರ ಎಲೆಕ್ಷನ್ ರಿಸಲ್ಟ್ :ಮೋದಿ-ನಿತೀಶ್ ಜೋಡಿಗಿಂದು ಅಗ್ನಿಪರೀಕ್ಷೆ

