ರಾಮಚರಿತಮಾನಸವನ್ನು ಪೊಟ್ಯಾಶಿಯಂ ಸೈನೈಡ್‌ಗೆ ಹೋಲಿಸಿದ ಬಿಹಾರ ಸಚಿವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಮಚರಿತ ಮಾನಸದಂತಹ ಗ್ರಂಥಗಳಲ್ಲಿ “ಪೊಟ್ಯಾಸಿಯಮ್ ಸೈನೈಡ್”ಗೆ ಹೋಲಿಸುವಷ್ಟು ಹಾನಿಕಾರಕ ಅಂಶಗಳನ್ನು ಹೊಂದಿದೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆರ್ ಜೆಡಿ ನಾಯಕನ ಈ ಹೇಳಿಕೆಯ ವೀಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ. ಇದು ನನ್ನ ದೃಷ್ಟಿಕೋನವಲ್ಲ, ಆದರೆ ಶ್ರೇಷ್ಠ ಹಿಂದಿ ಬರಹಗಾರ ನಾಗಾರ್ಜುನ, ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ಅವರೂ ಸಹ ರಾಮಚರಿತಮಾನಸದಲ್ಲಿ ಹಲವಾರು ಪ್ರತಿಗಾಮಿ ಆಲೋಚನೆಗಳಿವೆ ಎಂದು ಹೇಳಿದ್ದಾರೆಂದು ಸಚಿವರು ಪ್ರತಿಪಾದಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ 55 ಬಗೆಯ ತಿನಿಸುಗಳನ್ನು ತಯಾರಿಸಿ ಅದಕ್ಕೆ ಸೈನೈಡ್ ಸಿಂಪಡಿಸಿದರೆ ಆ ಆಹಾರ ಸೇವನೆಗೆ ಯೋಗ್ಯವಲ್ಲದಾಗುತ್ತದೆ ಎಂದಿದ್ದಾರೆ .

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಮಚರಿತ ಮಾನಸ ಕುರಿತು ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಕೇಳುತ್ತಿಲ್ಲವೇ? ನಿತೀಶ್ ಕುಮಾರ್ ಅವರು ಸನಾತನ ಸಂಸ್ಥೆಯನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಯಾವುದೇ ಸಮಸ್ಯೆ ಇದ್ದರೆ ಅವರು ಧರ್ಮ ಬದಲಿಸಲಿ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.

ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!