Sunday, November 2, 2025

Viral | ಲಂಡನ್‌ನಲ್ಲಿ ಬಿಹಾರಿಯ ಸಮೋಸಾ ಕ್ರಾಂತಿ! ತಿಂಗಳಿಗೆ ಲಕ್ಷ ಲಕ್ಷ ಎಣಿಸುತ್ತಿರುವ ಭಾರತೀಯನ ಕಥೆ ಕೇಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದುಕಿನಲ್ಲಿ ಯಶಸ್ಸು ಪಡೆಯಲು ದೊಡ್ಡ ಹೂಡಿಕೆ ಅಥವಾ ಅದೃಷ್ಟವಷ್ಟೇ ಬೇಕೆಂಬುದಿಲ್ಲ. ಬುದ್ಧಿವಂತಿಕೆ, ಆತ್ಮವಿಶ್ವಾಸ ಮತ್ತು ದುಡಿಯುವ ಛಲ ಇದ್ದರೆ ಸಾಕು ಎಂಬುದಕ್ಕೆ ಲಂಡನ್‌ನ ಈ ಬಿಹಾರಿ ವ್ಯಕ್ತಿಯ ಕಥೆ ಸಾಕ್ಷಿಯಾಗಿದೆ. ವಿದೇಶದಲ್ಲೂ ಭಾರತೀಯ ರುಚಿಯನ್ನು ಜೀವಂತವಾಗಿಟ್ಟುಕೊಂಡ ಈ ವ್ಯಕ್ತಿ, ತನ್ನದೇ ಆದ ಶೈಲಿಯಲ್ಲಿ ಸಮೋಸಾ ಮಾರಾಟ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾನೆ.

ಲಂಡನ್‌ನಲ್ಲಿ ಸಮೋಸಾ ಮಾರಾಟ ಮಾಡುವ ಬಿಹಾರದ ವ್ಯಕ್ತಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತನ ಮಾತನಾಡುವ ಶೈಲಿ, ಆತಿಥ್ಯ ಮತ್ತು ನಗು ಮುಖದ ಸೇವೆ ಗ್ರಾಹಕರ ಮನ ಗೆದ್ದಿದೆ. ವಿದೇಶದಲ್ಲಿ ವಾಸಿಸುವ ಭಾರತೀಯರು ಮಾತ್ರವಲ್ಲ, ವಿದೇಶಿಗರೂ ಕೂಡ ಆ ರುಚಿಗೆ ಮಾರುಹೋಗಿದ್ದಾರೆ.

ಆತ ಎರಡು ಸಮೋಸಾವನ್ನು 5 ಡಾಲರ್‌ಗೆ ಮಾರಾಟ ಮಾಡುತ್ತಿದ್ದು, ದಿನಕ್ಕೆ 7500–10,000 ಡಾಲರ್ ಗಳಿಕೆ ಸಾಧಿಸುತ್ತಿರುವುದಾಗಿ ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ದಿನಕ್ಕೆ ಸುಮಾರು 9 ರಿಂದ 10 ಲಕ್ಷ ರೂಪಾಯಿಗಳವರೆಗೆ ಆದಾಯ! ಈ ಮಟ್ಟದ ಯಶಸ್ಸು ಅಚ್ಚರಿ ಹುಟ್ಟಿಸುವಂತದ್ದಾದರೂ, ಅದರ ಹಿಂದೆ ಬಿಹಾರಿ ವ್ಯಕ್ತಿಯ ಕಠಿಣ ಪರಿಶ್ರಮ ಮತ್ತು ವ್ಯವಹಾರ ಬುದ್ಧಿವಂತಿಕೆಯೇ ಪ್ರಮುಖ ಕಾರಣ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರೋ ಬಿಹಾರಿ ವ್ಯಕ್ತಿಯ ವಿಡಿಯೋ ಈಗಾಗಲೇ 1.8 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಕಾಮೆಂಟ್‌ಗಳಲ್ಲಿ, “ನಿಮ್ಮ ಶ್ರಮ ಸ್ಪೂರ್ತಿದಾಯಕ,” “ನೀವು ಕೋಟ್ಯಾಧಿಪತಿ ಆದ ಬಳಿಕ ಭಾರತಕ್ಕೆ ಬನ್ನಿ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

error: Content is protected !!