ಹೊಸದಿಗಂತ ವರದಿ ಮಡಿಕೇರಿ:
ದ್ವಿಚಕ್ರ ವಾಹನ ಸೇತುವೆಗೆ ಡಿಕ್ಕಿಯಾದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಗೋಣಿಕೊಪ್ಪ ಬಳಿ ನಡೆದಿದೆ.
ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ನಿವಾಸಿ ಪವನ್ ಕುಮಾರ್ (23) ಮೃತ ಯುವಕ.
ಪವನ್ ಕುಮಾರ್ ಚಾಲಿಸುತ್ತಿದ್ದ ಬೈಕ್ ಚೆನ್ನಂಗೊಲ್ಲಿ ಬಳಿ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿದೆ.ಈ ಸಂದರ್ಭ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದರೆ,ಹಿಂಬದಿ ಸವಾರ ಗೋಣಿಕೊಪ್ಪದ ವೆಂಕಟಪ್ಪ ಲೇಔಟ್’’ನ ದಿಲನ್ ಎಂಬಾತ ಸಣ್ಣಪುಟ್ಟ ಗಾಯಗಳೊಂದಿಗೆ ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.