ದಿಗಂತ ವರದಿ ವಿಜಯಪುರ:
ಬೈಕ್ ಹಾಗೂ ಮಹಾರಾಷ್ಟ್ರದ ಸಾರಿಗೆ ಬಸ್ ಮಧ್ಯೆ ಡಿಕ್ಕಿಯಾಗಿ, ಬೈಕ್ ನಲ್ಲಿದ್ದ ಬಾಲಕಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ತಿಕೋಟಾದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ವಡರಟ್ಟಿ ಗ್ರಾಮದ ಸವಿತಾ ಪೂಜಾರಿ (15) ಮೃತಪಟ್ಟ ಬಾಲಕಿ.
ಮುದಗೊಂಡ ಪೂಜಾರಿ ಎಂಬವರು ತಮ್ಮ ಪುತ್ರಿಯೊಂದಿಗೆ ಬೈಕ್ ನಲ್ಲಿ ಅರಕೇರಿ ಅಮೋಘ ಸಿದ್ಧ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತವಾಗಿದೆ. ಹಿಂಬಂದಿ ಸೀಟಿನಲ್ಲಿ ಕುಳಿತ್ತಿದ್ದ ಪುತ್ರಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದ್ದು, ತಂದೆ ಮುದಗೊಂಡಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಾರಿಗೆ ಬಸ್ ಸಮೇತ ಚಾಲಕನನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.