ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಕ್ ನಲ್ಲಿ ಐಪಿಎಲ್ ಮ್ಯಾಚ್ ನೋಡುತ್ತಾ ಸಂಚರಿಸುತ್ತಿದ್ದ ಆಸಾಮಿ ಒಬ್ಬನನ್ನು ಠಾಣೆಗೆ ಕರೆಸಿ, ದಂಡ ವಿಧಿಸಿ ತಿಳುವಳಿಕೆ ಹೇಳಿ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿವಾಜಿನಗರದ ಬ್ರಾಡ್ ರಸ್ತೆಯಲ್ಲಿ ಬೈಕ್ ಓಡಿಸುತ್ತಾ ಪಂದ್ಯ ವೀಕ್ಷಣೆ ಮಾಡುತ್ತಿದ್ದ. ಎಲೆಕ್ಟ್ರಿಕ್ ಬೈಕ್ ಸವಾರನಿಗೆ ಸಂಚಾರಿ ಪೊಲೀಸರು ಇದೀಗ ದಂಡ ವಿಧಿಸಿದ್ದಾರೆ.ಬೈಕ್ ಓಡಿಸುವಾಗ ಐಪಿಎಲ್ ವೀಕ್ಷಿಸುತ್ತಿದ್ದವರ ಬಗ್ಗೆ ವಿಡಿಯೋ ಸಹಿತ ದೂರು ನೀಡಲಾಗಿತ್ತು.
ಹಾಗಾಗಿ ವಿಡಿಯೋ ಆಧಾರದಲ್ಲಿ ಟಿವಿ ಬೈಕ್ ಸವಾರ ಪ್ರಶಾಂತ್ ನನ್ನು ಕರೆಸಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. 1,500 ರೂಪಾಯಿಗಳ ದಂಡ ವಿಧಿಸಿ ಪೊಲೀಸರು ತಿಳುವಳಿಕೆ ಹೇಳಿ ಕಳುಹಿಸಿದ್ದಾರೆ.