ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಬೈಕ್ ಸವಾರ ಇನ್ಫೋಸಿಸ್ ಉದ್ಯೋಗಿ ಸುಳ್ಯದ ಪೆರಾಜೆಯ ಎ. ಕಾರ್ತಿಕ್ ಭಟ್ (30) ಮೃತ ದುರ್ದೈವಿ. ಮಡಿಕೇರಿಯಿಂದ ಕುಶಾಲನಗರದತ್ತ ಬರುತ್ತಿದ್ದ ಮಾದಾಪುರ ನಿವಾಸಿ ಬೋಪಣ್ಣ ಅವರ ಕಾರು ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಕುಶಾಲನಗರ ಆಸ್ಪತ್ರೆಗೆ ರವಾನಿಸಿದರೂ ಕೊನೆಯುಸಿರೆಳೆದಿದ್ದಾನೆ. ಡಿಕ್ಕಿ ಹೊಡೆದ ಬಳಿಕ ಕಾರು ರಸ್ತೆ ಬದಿಗೆ ವಾಲಿಕೊಂಡಿದೆ. ಅಪಘಾತದಲ್ಲಿ ಗಾಯಗೊಂಡ ಉಳಿದವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕುಶಾಲನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.