ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ನಾರ್ಕೋಟಾ ಬಳಿ 200 ಮೀಟರ್ ಆಳದ ಕಮರಿಗೆ ಬಿದ್ದ ಬೈಕ್ ಸವಾರನನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ರಕ್ಷಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ವೇಳೆ ಬೈಕ್ ಸವಾರ ಕಮರಿಗೆ ಬಿದ್ದಿದ್ದಾನೆ. ಎಸ್‌ಡಿಆರ್‌ಎಫ್ ಅಧಿಕಾರಿಗಳು ವ್ಯಕ್ತಿ ಕಮರಿಗೆ ಬಿದ್ದ ಬಗ್ಗೆ ತಿಳಿದ ತಕ್ಷಣ, ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ವ್ಯಕ್ತಿಯನ್ನು ತಕ್ಷಣದ ವೈದ್ಯಕೀಯ ಆರೈಕೆಗಾಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ.
ಎಸ್‌ಡಿಆರ್‌ಎಫ್ ಹಿಂದಿನ ರಾತ್ರಿ ಜೂನ್ 18 ರಂದು ಮತ್ತೊಂದು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ, ಗುರುದ್ವಾರ ಶ್ರೀ ರೀತಾ ಸಾಹಿಬ್‌ಗೆ ತೆರಳುತ್ತಿದ್ದ 40-45 ಜನರನ್ನು ಹೊತ್ತ ಬಸ್ ಧೋನ್ ಬಳಿ ಪಲ್ಟಿಯಾಗಿತ್ತು.
ಎಸ್‌ಡಿಆರ್‌ಎಫ್ ಮತ್ತು ಇತರ ಘಟಕಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಿಸಲಾಯಿತು. 25 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.