Thursday, October 16, 2025

ಡೋಣಿ ನದಿ ದಾಟಲು ಹೋಗಿ ಕೊಚ್ಚಿ ಹೋದ ಬೈಕ್ ಸವಾರ

ಹೊಸದಿಗಂತ ವರದಿ,ವಿಜಯಪುರ:

ತುಂಬಿ ಹರಿಯುತ್ತಿದ್ದ ಡೋಣಿ ನದಿ ದಾಟಲು ಹೋಗಿ ಇಬ್ಬರ ಪೈಕಿ, ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.

ವಡವಡಗಿ ಗ್ರಾಮದ ಸಂತೋಷ ಶಿವಲಿಂಗಪ್ಪ ಹಡಪದ ನದಿ ನೀರಲ್ಲಿ ನಾಪತ್ತೆಯಾದ ವ್ಯಕ್ತಿ.

ವಡವಡಗಿ ಗ್ರಾಮದ ಮಹಾಂತೇಶ ಮಲ್ಲನಗೌಡ ಹೊಸಗೌಡ್ರು ಹಾಗೂ ಸಂತೋಷ ಶಿವಲಿಂಗಪ್ಪ ಹಡಪದ ಇಬ್ಬರೂ ಸೇರಿ ಬೈಕ್ ನಲ್ಲಿ ಡೋಣಿ ನದಿ ಸೇತುವೆ ಮೇಲೆ ತೆರಳುತ್ತಿದ್ದಾಗ, ನೀರಿನ ರಭಸಕ್ಕೆ ಬೈಕ್ ಸಹಿತ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಮಹಾಂತೇಶ ಮಲ್ಲನಗೌಡ ಹೊಸಗೌಡರ ಈಜಿ ದಡ ಸೇರಿದ್ದರೆ, ಸಂತೋಷ ಹಡಪದ ನಾಪತ್ತೆಯಾಗಿದ್ದಾನೆ. ಈತನ ಶೋಧ ಕಾರ್ಯ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ನಡೆದಿದೆ.

ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!