ಹೊಸದಿಗಂತ ಡಿಜಿಟಲ್ ಡೆಸ್ಕ್
2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬವನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಆರೋಪಿಗಳ ಅವಧಿಪೂರ್ವ ಬಿಡುಗಡೆಗೆ ಗೃಹ ಸಚಿವಾಲಯ ಮತ್ತು ಸಿಬಿಐ ಮತ್ತು ವಿಶೇಷ ನ್ಯಾಯಾಲಯ ಅನುಮೋದಿಸಿದೆ.
14 ವರ್ಷಗಳಿಂದ ಜೈಲಿನಲ್ಲಿದ್ದು, ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡುಬಂದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಮತ್ತು ಕೇಂದ್ರವೂ ಈ ಬಗ್ಗೆ ತನ್ನ ಅನುಮೋದನೆಯನ್ನು ತಿಳಿಸಿದೆ.
ಜೂನ್ 28, 2022 ರಂದು 11 ಅಪರಾಧಿಗಳ ಕ್ಷಮಾಪಣೆಗಾಗಿ ರಾಜ್ಯವು ಕೇಂದ್ರದ ಅನುಮೋದನೆಯನ್ನು ಕೋರಿತ್ತು, ಜುಲೈ 11 ರಂದು ಸಚಿವಾಲಯವು ಒಪ್ಪಿಗೆ ನೀಡಿತ್ತು ಎಂಬ ವಿಚಾರ ಅಫಿಡವಿಟ್ ನಲ್ಲಿದೆ.
ಹಾಕಿದ್ದರೂ ಶಿಕ್ಷೆಗೊಳಗಾದ ಖೈದಿಗಳ ಬಿಡುಗಡೆಗೆ ಒಂದು ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೇಂದ್ರದ ಅನುಮತಿಯಿಲ್ಲದೆ ಆರೋಪಿಗಳ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆಇದೀಗ ಸ್ಪಷ್ಟನೆ ಸಿಕ್ಕಿದೆ. ಕೇಂದ್ರ ಗೃಹ ಸಚಿವಾಲಯವು 11.07.2022 ರಲ್ಲಿ ನೀಡಿದ್ದ ಪತ್ರದ ಮೂಲಕ ಅವಧಿಪೂರ್ವ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಹೇಳುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ