ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವ ಮಾದೇಶ್ವರ ಮತ್ತೆ ಕೋಟ್ಯಾಧಿಪತಿಯಾಗಿದ್ದಾನೆ. ಮೈಕಾರ ಮಾದಪ್ಪನ ಹುಂಡಿಯಲ್ಲಿ 2 ಕೋಟಿ 58 ಲಕ್ಷ ದೇಣಿಗೆ ಸಂಗ್ರಹವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆದಿದ್ದು, ಕಳೆದ ಮೂವತ್ತು ದಿನಗಳಲ್ಲಿ ಮಹದೇಶ್ವರನಿಗೆ ಒಟ್ಟು 2,58,44,097 ರೂ. ಕಾಣಿಕೆ ಹರಿದು ಬಂದಿದೆ.
93 ಗ್ರಾಂ ಚಿನ್ನ ಮತ್ತು 3 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹಿಸಲಾಗಿದೆ. ಹುಂಡಿಯಲ್ಲಿ ಸೌದಿ ಅರೇಬಿಯಾ, ಜಪಾನ್, ನೇಪಾಳ ಮತ್ತು ಕತಾರ್ ದೇಶದ ನಾಲ್ಕು ನೋಟುಗಳು ಪತ್ತೆಯಾಗಿವೆ. ಹುಂಡಿಯಲ್ಲೂ ಸದ್ಯ ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 25 ನೋಟುಗಳು ಪತ್ತೆಯಾಗಿವೆ.