ಬಿಂದೇಶ್ವರ ಪಾಠಕ್ ನಿಧನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರು ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ .

1968 ರಲ್ಲಿ ಬಿಂದೇಶ್ವರ ಪಾಠಕ್ ಅವರು ಆವಿಷ್ಕರಿಸಿದ ಡಿಸ್ಪೋಸಲ್ ಕಾಂಪೋಸ್ಟ್ ಶೌಚಾಲಯ ಮಲ ಹೊರುವ ಪದ್ಧತಿಯನ್ನು ಕೊನೆಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. 1970 ರಲ್ಲಿ ಅವರು ತಮ್ಮ ಸೇವಾ ಸಂಸ್ಥೆ ‘ಸುಲಭ್ ಇಂಟರ್ನ್ಯಾಷನಲ್’ ಅನ್ನು ಸ್ಥಾಪಿಸಿದರು. ಅಂದಿನಿಂದ, ಕಳೆದ ಐದು ದಶಕಗಳಲ್ಲಿ, ಈ ಸಂಸ್ಥೆಯು ಕೋಟಿಗಟ್ಟಲೆ ಜನರಿಗೆ ಸರಳ ಮತ್ತು ಸ್ವಚ್ಛ ಶೌಚಾಲಯಗಳನ್ನು ಒದಗಿಸುವಲ್ಲಿ ಮಹತ್ವಪೂರ್ಣವಾದ ಪಾತ್ರ ವಹಿಸಿದೆ.

ಪಾಠಕ್ ಅವರ ಅವಿರತ ಪ್ರಯತ್ನದಿಂದಾಗಿ, ಇಂದು ದೇಶದಲ್ಲಿ ಅವರ ಸಂಸ್ಥೆಯು ನಿರ್ಮಿಸಿರುವ 8500 ಸುಲಭ ಶೌಚಾಲಯಗಳು ಮತ್ತು ಸ್ನಾನಗೃಹಗಳಿವೆ. ತಮ್ಮ ಸೇವಾಕಾರ್ಯಗಳಿಗಾಗಿ ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಬಿಂದೇಶ್ವರ ಪಾಠಕ್ ಅವರಿಗೆ ಭಗವಂತನು ತನ್ನ ಪಾದಕಮಲದಲ್ಲಿ ಸ್ಥಾನ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!