‘ಸುಲಭ್ ಶೌಚಾಲಯ’ ಸ್ಥಾಪನೆ ಮೂಲಕ ನೌರ್ಮಲ್ಯದ ಅರಿವು ಮೂಡಿಸಿದ್ದ ಬಿಂದೇಶ್ವರ ಪಾಠಕ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಲಭ್ ಶೌಚಾಲಯದ ಮೂಲಕ ಜನರಿಗೆ ನೈರ್ಮಲ್ಯದ ಅರಿವು ಮೂಡಿಸಿದ್ದ ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ ಪಾಠಕ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದ ಕೆಲವೇ ಹೊತ್ತಿನಲ್ಲಿ ಬಿಂದೇಶ್ವರ ಅವರಿಗೆ ಎದೆನೋವು ಕಾಣಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಬಿಂದೇಶ್ವರ ಅವರಿಗೆ 80 ವರ್ಷ ವಯಸ್ಸಾಗಿತ್ತು.

ದೇಶದಲ್ಲಿ ನೈರ್ಮಲ್ಯದ ಬಗ್ಗೆ ಬಿಂದೇಶ್ವರ ಅವರು ಸದಾ ಚಿಂತಿಸಿದ್ದರು. ಬಯಲು ಶೌಚ ಮುಕ್ತ ಮಾಡುವ ಉದ್ದೇಶವಿದ್ದ ಬಿಂದೇಶ್ವರ ಅವರು ಸುಲಭ್ ಶೌಚಾಲಯ ಹೆಸರಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ತೆರೆದು ಜನರಿಗೆ ಸಹಾಯ ಮಾಡಿದ್ದರು.

ಕೋಟ್ಯಂತರ ಮಂದಿ ಸುಲಭ್ ಶೌಚಾಲಯದ ಉಪಯೋಗ ಪಡೆದಿದ್ದಾರೆ. ಒಟ್ಟಾರೆ 1.3 ಮಿಲಿಯನ್‌ಗೂ ಹೆಚ್ಚು ಮನೆ ಶೌಚಾಲಯಗಳು ಹಾಗೂ 50 ಮಿಲಿಯನ್‌ಗೂ ಹೆಚ್ಚು ಸರ್ಕಾರಿ ಶೌಚಾಲಯಗಳನ್ನು ಸುಲಭ್ ಇಂಟರ್‌ನ್ಯಾಷನಲ್ಸ್ ನಿರ್ಮಿಸಿದೆ. ಬಿಂದೇಶ್ವರ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಸಮಾಜಕ್ಕೆ ನೀಡಿದ ಕೊಡುಗೆಯಿಂದಾಗಿ ಪಾಠಕ್ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!