ಬರ್ತ್ ಸರ್ಟಿಫಿಕೇಟ್ ಫೋರ್ಜರಿ ಕೇಸ್: ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಸಲ್ಲಿಸಿದ್ದ ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನನ ಪ್ರಮಾಣಪತ್ರಗಳನ್ನ ನಕಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಕುಟುಂಬ ಸದಸ್ಯರು ಮತ್ತು ತರಬೇತುದಾರ ಯು. ವಿಮಲ್ ಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

ಲಕ್ಷ್ಯ ಸೇನ್ ಅವರ ಪೋಷಕರಾದ ಧೀರೇಂದ್ರ ಮತ್ತು ನಿರ್ಮಲಾ ಸೇನ್, ಸಹೋದರ ಚಿರಾಗ್ ಸೇನ್, ತರಬೇತುದಾರ ಯು. ವಿಮಲ್ ಕುಮಾರ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಉದ್ಯೋಗಿಯೊಬ್ಬರು ಜನನ ದಾಖಲೆಗಳನ್ನು ಸುಳ್ಳು ಮಾಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎಂ.ಜಿ. ನಾಗರಾಜ್ ದೂರು ದಾಖಲಿಸಿದ್ದರು.

ದೂರಿನ ಪ್ರಕಾರ, ಆರೋಪಿಗಳು ಲಕ್ಷ್ಯ ಸೇನ್ ಮತ್ತು ಚಿರಾಗ್ ಸೇನ್ ಜನನ ಪ್ರಮಾಣಪತ್ರಗಳನ್ನು ತಿರುಚಿದ್ದಾರೆ. ಅವರ ವಯಸ್ಸನ್ನು ಸುಮಾರು ಎರಡೂವರೆ ವರ್ಷಗಳಷ್ಟು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಯೋಮಾನ ನಿರ್ಬಂಧಿತ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ರೀತಿ ಮಾಡಲಾಗಿದೆ.

ಈ ಪ್ರಕರಣದ ತನಿಖೆಗೆ ಅಗತ್ಯವಿರುವ ಪ್ರಾಥಮಿಕ ಪುರಾವೆಗಳಿರುವುದರಿಂದ ನ್ಯಾಯಾಲಯವು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತನಿಖೆ ನಡೆಸಲು ನಿರ್ದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!