ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಅಕ್ಟೋಬರ್ 1ರ ನಂತರ ಹುಟ್ಟಿದ ಪ್ರತಿಯೊಬ್ಬ ನಾಗರಿಕನಿಗೂ ಪಾಸ್‌ಪೋರ್ಟ್ ಪಡೆಯಲು ಜನನ ಪ್ರಮಾಣಪತ್ರ ಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜನನ ಮತ್ತು ಮರಣಗಳ ತಿದ್ದುಪಡಿ ಕಾನೂನು-2023ರ ಅನ್ವಯ ಈ ಅಧಿಸೂಚನೆ ಹೊರಡಿಸಲಾಗಿದೆ.
2025ರ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳ ಅನ್ವಯ 2023ರ ಅಕ್ಟೋಬರ್ 1ರ ಮುಂಚೆ ಜನಿಸಿದವರಿಗೆ ಜನನ ಪುರಾವೆಯಾಗಿ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶಾಲೆಯ ಟ್ರಾನ್ಸಫರ್ ಪ್ರಮಾಣಪತ್ರಗಳಂತಹ ಇತರ ದಾಖಲೆಗಳನ್ನು ಸಲ್ಲಿಸಲು ಅವಕಾಶ ಇದೆ.