‘ಸಾರಥಿ’ಗೆ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಗಾಗಿ ದಾಸನ CDP ಬಿಡುಗಡೆ ಮಾಡಿದ ವಿಜಯಲಕ್ಷ್ಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನಟ ದರ್ಶನ್ ತೂಗುದೀಪ ಹುಟ್ಟುಹಬ್ಬ, ದರ್ಶನ್ ಮತ್ತು ಅವರ ಕುಟುಂಬದವರಿಗೆ ಮಹತ್ವವಾದುದು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಬಂದ ಬಳಿಕ ಇದು ಅವರ ಮೊದಲ ಹುಟ್ಟುಹಬ್ಬವಾಗಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ.

ಬಹುಷಃ ಇದು ಮೊದಲನೇ ಬಾರಿಗೆ ವಿಜಯಲಕ್ಷ್ಮಿ ಅವರು ದರ್ಶನ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಈಗ ಬಿಡುಗಡೆ ಮಾಡಲಾಗಿರುವ ಡಿಪಿಯಲ್ಲಿ, ದರ್ಶನ್​ರ ದೊಡ್ಡ ಕಟೌಟ್​ನ ಚಿತ್ರವಿದ್ದು, ಚಿತ್ರದಲ್ಲಿ ಅಭಿಮಾನಿಗಳೆಡೆಗೆ ದರ್ಶನ್ ಕೈಬೀಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿಗಳಿಗೂ ದರ್ಶನ್ ಅವರ ಹೆಸರೇ ಇದೆ. ಅಭಿಮಾನಿಗಳು ದರ್ಶನ್ ಕಟೌಟ್​ ಕಡೆಗೆ ಕೈ ಬೀಸುತ್ತಿರುವ ಚಿತ್ರಣವೂ ಈ ಡಿಪಿಯಲ್ಲಿದೆ.

ದರ್ಶನ್ ಮತ್ತೆ ಹಳೆಯ ಫಾರ್ಮ್​ನೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Vijayalakshmi darshan (@viji.darshan)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!