ಬಿರಿಯಾನಿ ಅಂದರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ವಿಶೇಷವಾಗಿ ವೆಜ್ ಬಿರಿಯಾನಿ ಎಂದರೆ ತರಕಾರಿ ಮತ್ತು ಮಸಾಲೆಯ ಪರಿಪೂರ್ಣ ಸವಿರುಚಿ. ಇವತ್ತು ನಿಮಗೆ ಇನ್ಸ್ಟಂಟ್ ವೆಜ್ ಬಿರಿಯಾನಿ ತಯಾರಿಸುವ ಸರಳ ವಿಧಾನವನ್ನು ಹೇಳಿಕೊಡುತ್ತಿದ್ದೇನೆ. ಮೊಸರುಬಜ್ಜಿ ಜೊತೆಗೆ ಇದನ್ನು ಬಡಿಸಿದರೆ ರುಚಿ ಮತ್ತೂ ಹೆಚ್ಚಾಗುತ್ತದೆ.
ಅಗತ್ಯವಿರುವ ಸಾಮಗ್ರಿಗಳು:
ತುಪ್ಪ – 1 ಚಮಚ
ಬೇ ಎಲೆ (ತೇಜ್ ಪಟ್ಟಾ) – 1
ಜೀರಿಗೆ – ¼ ಟೀಸ್ಪೂನ್
ದಾಲ್ಚಿನ್ನಿ – 1 ಇಂಚು ತುಂಡು
ಸ್ಟಾರ್ ಮೊಗ್ಗು – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ½ ಟೀಸ್ಪೂನ್
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)
ಕ್ಯಾರೆಟ್ – ½ (ಕತ್ತರಿಸಿದ)
ಗೋಬಿ ಹೂ – 8 ತುಂಡುಗಳು
ಆಲೂಗಡ್ಡೆ – ¼ (ಕತ್ತರಿಸಿದ)
ಕ್ಯಾಪ್ಸಿಕಂ – ¼ (ಕತ್ತರಿಸಿದ)
ಬೀನ್ಸ್ – 3 (ಕತ್ತರಿಸಿದ)
ಮೊಸರು – ¼ ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ½ ಟೀಸ್ಪೂನ್
ಬಿರಿಯಾನಿ ಮಸಾಲ – 1 ಟೀಸ್ಪೂನ್
ಪುದೀನಾ – 2 ಟೇಬಲ್ಸ್ಪೂನ್ (ಕತ್ತರಿಸಿದ)
ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್ (ಕತ್ತರಿಸಿದ)
ಉಪ್ಪು – ½ ಟೀಸ್ಪೂನ್
ಬೇಯಿಸಿದ ಬಾಸ್ಮತಿ ಅಕ್ಕಿ – 2 ಕಪ್
ತಯಾರಿಸುವ ವಿಧಾನ:
ಮೊದಲು ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ. ಅದರಲ್ಲಿ ಬೇ ಎಲೆ, ದಾಲ್ಚಿನ್ನಿ, ಸ್ಟಾರ್ ಮೊಗ್ಗು ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ.
ಈಗ ಒಂದೊಂದೇ ತರಕಾರಿಗಗಳನ್ನೂ (ಕ್ಯಾರೆಟ್, ಆಲೂಗಡ್ಡೆ, ಕ್ಯಾಪ್ಸಿಕಂ, ಗೋಬಿ ಹೂ, ಬೀನ್ಸ್) ಸೇರಿಸಿ ಸ್ವಲ್ಪ ಫ್ರೈ ಮಾಡಿ. ಅದಕ್ಕೆ ಮೊಸರು, ಕೆಂಪು ಮೆಣಸಿನ ಪುಡಿ, ಬಿರಿಯಾನಿ ಮಸಾಲ ಮತ್ತು ಉಪ್ಪು ಸೇರಿಸಿ. ಎಣ್ಣೆ ಬದಿಯಿಂದ ಬಿಡುವವರೆಗೆ ಬೇಯಿಸಿ.
ನಂತರ ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಈಗ ಬೇಯಿಸಿದ ಬಾಸ್ಮತಿ ಅನ್ನ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿದರೆ ಇನ್ಸ್ಟಂಟ್ ವೆಜ್ ಬಿರಿಯಾನಿ ರೆಡಿ.